ಗೋಕಾಕ; ರಮೇಶ ಗೆಲುವು, ಸತೀಶಗೆ ಭಾರೀ ಮುಖಭಂಗ!

ಬೆಳಗಾವಿ, ಡಿಸೆಂಬರ್ 9: ಗೋಕಾಕ ಉಪ ಚುನಾವಣೆ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯ ರಮೇಶ ಜಾರಕಿಹೊಳಿ ಅವರು, ತಮ್ಮ ಸಹೋದರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಕೊನೆಗೂ ಸೋಲಿನ ರುಚಿ ತೋರಿಸಿದ್ದಾರೆ.

ರಮೇಶ ಅವರು 29,006 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲುಣಿಸಿದ್ದಾರೆ. 87,450 ಸಾವಿರ ಮತಗಳನ್ನು ರಮೇಶ್ ಪಡೆದರೆ, ಲಕನ್ 58,444 ಸಾವಿರ ಮತಗಳಗಳನ್ನು ಪಡೆಯವಲ್ಲಿ ಸಫಲವಾದರು. ಜೆಡಿಎಸ್ ನ ಬೀಮಪ್ಪ ಪೂಜಾರಿ 27948 ಸಾವಿರ ಮತಗಳ ಪಡೆದರು. ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು.

ರಮೇಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ನ ಲಕನ್ ಜಾರಕಿಹೊಳಿ ಅವರ ನಡುವೆ ನೇರ ಸ್ಪರ್ಧೆ ಇತ್ತು. ಆರಂಭದಿಂದ ಹತ್ತು ಸುತ್ತಿನವರೆಗೂ ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಹತ್ತನೇ ಸುತ್ತಿನ ನಂತರ ರಮೇಶ ಜಾರಕಿಹೊಳಿ ಅವರು 11,702 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. ಅಲ್ಲಿಯವರೆಗೆ 40 ಸಾವಿರ ಮತಗಳನ್ನು ಲಕನ್ ಪಡೆದಿದ್ದರೇ, 50,702 ಮತಗಳನ್ನು ರಮೇಶ್ ಪಡೆದಿದ್ದರು. ಆ ನಂತರ ವಿಜಯಲಕ್ಷ್ಮಿ ಸಂಪೂರ್ಣ ರಮೇಶ ಪರ ವಾಲಿದಳು.

ಗೋಕಾಕ; ರಮೇಶ ಗೆಲುವು, ಸತೀಶಗೆ ಭಾರೀ ಮುಖಭಂಗ!

ಬೆಳಗಾವಿಯ ಆರ್ ಪಿ ಡಿ ಮೈದಾನದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ರಮೇಶ ಬೆಂಬಲಿಗರು ಮತ ಎಣಿಕೆ ಕೇಂದ್ರದ ಮುಂದೆ ಸಂಭ್ರಮಾಚರಣೆ ಮಾಡಿದರು. ರಮೇಶ ಗೆಲುವಿನಿಂದ ಕಾಂಗ್ರೆಸ್ ನ ಪ್ರಭಾವಿ ಮುಖಂಡ ಹಾಗೂ ರಮೇಶ ಅವರ ಇನ್ನೊಬ್ಬ ಸಹೋದರ ಸತೀಶ ಜಾರಕಿಹೊಳಿಗೆ ಭಾರೀ ಮುಖಭಂಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+