ಗೋಕಾಕ ಉಪ ಚುನಾವಣೆ; ಗೆಲುವಿನ ದಡದತ್ತ ರಮೇಶ ಜಾರಕಿಹೊಳಿ
ಬೆಳಗಾವಿ, ಡಿಸೆಂಬರ್ 9: ಗೋಕಾಕ ಉಪ ಚುನಾವಣೆ ಮತ ಎಣಿಕೆ ಕಾರ್ಯ ಅಂತಿಮ ಸುತ್ತಿನಲ್ಲಿದ್ದು 10 ಸುತ್ತಿನ ಮತ ಎಣಿಕೆ ನಂತರ ಬಿಜೆಪಿಯ ರಮೇಶ ಜಾರಕಿಹೊಳಿ ಅವರು, ಗೆಲುವಿನತ್ತ ಮುಖ ಮಾಡಿದ್ದಾರೆ.
ರಮೇಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ನ ಲಕನ್ ಜಾರಕಿಹೊಳಿ ಅವರ ನಡುವೆ ನೇರ ಸ್ಪರ್ಧೆ ಇತ್ತು. ಆರಂಭದಿಂದ ಹತ್ತು ಸುತ್ತಿನವರೆಗೂ ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಹತ್ತನೇ ಸುತ್ತಿನ ನಂತರ ರಮೇಶ ಜಾರಕಿಹೊಳಿ ಅವರು 11,702 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. ಅಲ್ಲಿಯವರೆಗೆ 40 ಸಾವಿರ ಮತಗಳನ್ನು ಲಕನ್ ಪಡೆದಿದ್ದರೇ, 50,702 ಮತಗಳನ್ನು ರಮೇಶ್ ಪಡೆದಿದ್ದರು. ಬಿಜೆಪಿಯಿಂದ ಜೆಡಿಎಸ್ ಗೆ ವಲಸೆ ಹೋಗಿ ಸ್ಪರ್ಧಿಸಿದ್ದ ಬೀಮಪ್ಪ ಪೂಜಾರಿ ಇಲ್ಲಿಯವರೆಗೆ 10 ಸಾವಿರ ಮತಗಳನ್ನು ಪಡೆದಿದ್ದಾರೆ.

ಬೆಳಗಾವಿಯ ಆರ್ ಪಿ ಡಿ ಮೈದಾನದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇನ್ನು ನಾಲ್ಕು ಸುತ್ತಿನ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಗೆಲುವು ಖಾತ್ರಿ ಎಂದು ರಮೇಶ ಬೆಂಬಲಿಗರು ಮತ ಎಣಿಕೆ ಕೇಂದ್ರದ ಮುಂದೆ ಸಂಭ್ರಮಾಚರಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.












Click it and Unblock the Notifications