ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಉಚಿತ ವೈ ಫೈ
ಬೆಳಗಾವಿ, ಡಿ. 19: ಕೇಂದ್ರ ಸರ್ಕಾರ ದೇಶದ 25 ನಗರಗಳಿಗೆ ಉಚಿತ ವೈ ಫೈ ನೀಡುವುದಾಗಿ ಘೋಷಿಸಿತ್ತು. ಇದೀಗ ರಾಜ್ಯ ಸರ್ಕಾರದ ಸರದಿ.
ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಉಚಿತ ವೈ ಫೈ ಸೌಲಭ್ಯ ಒದಗಿಸುವ ಯೋಜನೆ ಇದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಕುರಿತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೇಳಿದ್ದ ಪ್ರಶ್ನೆಗೆ ಎಸ್.ಆರ್. ಪಾಟೀಲ ಲಿಖಿತ ಉತ್ತರ ನೀಡಿದ್ದಾರೆ. ಪ್ರಸ್ತುತ ಬೆಂಗಳೂರು ಹಾಗೂ ಜಿಲ್ಲೆಗಳ ಪ್ರಮುಖ ಪ್ರದೇಶಗಳಲ್ಲಿ ಉಚಿತ ವೈ ಫೈ ಸೇವೆಗಾಗಿ ವಿವಿಧ ಕಂಪನಿಗಳಿಂದ ಬಿಡ್ ಆಹ್ವಾನಿಸಲಾಗಿದೆ. ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದ್ದಾರೆ. [ಇಡೀ ವಿಶ್ವಕ್ಕೇ ವೈ ಫೈ : ಅಮೆರಿಕ ಕನಸು]
ಕರ್ನಾಟಕದಲ್ಲಿ ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಬಾಗಲಕೋಟೆ ನಗರಗಳ ಕೆಲವು ಭಾಗಗಳಲ್ಲಿ ಈಗಾಗಲೇ ಉಚಿತ ವೈ ಫೈ ಸಂಪರ್ಕ ಕಲ್ಪಿಸಲಾಗಿದೆ. [ವೈ ಫೈ ವಿಕಿರಣ ಮರಕ್ಕೆ ಮಾರಕ?]












Click it and Unblock the Notifications