ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢ
ಬೆಳಗಾವಿ, ಏಪ್ರಿಲ್ 12: ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಇಂದು ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರ ವರದಿ ಪಾಸಿಟಿವ್ ಬಂದಿದ್ದು, ಸೊಂಕಿತರ ಸಂಖ್ಯೆ 10 ರಿಂದ 14 ಕ್ಕೆ ಏರಿದೆ.
ಇಂದು ಬೆಳಿಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ರಾಯಬಾಗದ ಕುಡಚಿಯ ನಾಲ್ವರು ಸೋಂಕಿತರ ಸಂಬಂಧಿಕರ ಮೂರು ಜನರ ರಿಪೋರ್ಟ್ ಪಾಸಿಟಿವ್ ಬಂದಿದ್ದು, ರಾಯಬಾಗದಲ್ಲಿ ಸೋಂಕಿತರ ಸಂಖ್ಯೆ 7 ಕ್ಕೆ ಏರಿದೆ. ಹಿರೇಬಾಗೇವಾಡಿ ಯಲ್ಲಿ ಒಂದು ಹೊಸ ಕೊರೊನಾ ಸೋಂಕಿತ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯು ಸಂಪೂರ್ಣವಾಗಿ ಸೀಲ್ ಡೌನ್ ಆಗುವ ಆತಂಕ ಎದುರಾಗಿದೆ.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಒಂದೇ ಸಮುದಾಯದಲ್ಲಿ ಬೆಳೆಯುತ್ತಿದೆ. ಇದು ಉಳಿದ ಸಮುದಾಯದವರಿಗೂ ಕೂಡ ಆತಂಕ ಉಂಟುಮಾಡಿದೆ.
ಇಂದು ಜಿಲ್ಲೆಯ ಮೂವರಿಗೆ ಹೊಸದಾಗಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆತಂಕ ಹೆಚ್ಚಾಗಿದ್ದು, ಜನ ಮನೆಯಿಂದ ಹೊರಗೆ ಬಾರದೇ ಲಾಕ್ ಡೌನ್ ಕಡ್ಡಾಯವಾಗಿ ಪಾಲಿಸಿದರೆ ಕೊರೊನಾ ಸೋಂಕು ಸಾಮಾಜಿಕವಾಗಿ ಹರಡದಂತೆ ತಡೆಯಬಹುದಾಗಿದೆ.











Click it and Unblock the Notifications