ಬೆಳಗಾವಿ ಜೈಲಿನಲ್ಲಿದ್ದ ಸಿಆರ್ ಪಿಎಫ್ ಯೋಧ ಬಿಡುಗಡೆ

ಬೆಳಗಾವಿ, ಏಪ್ರಿಲ್ 28: ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ಸಿಆರ್ ಪಿಎಫ್ ಯೋಧನನ್ನು ಇಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮಾಸ್ಕ ಹಾಕಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ CoBRA ವಿಭಾಗದ ಕಮಾಂಡೋ ಸಚಿನ್ ಸಾವಂತ್ ನನ್ನು ಬಂಧಿಸಿ ಕೈಗೆ ಕೋಳ ಹಾಕಿ ಅಪರಾಧಿಯಂತೆ ನಡೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಜೊತೆಗೆ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೂಡ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಬೆಳಗಾವಿ ಹಿಂಡಲಗಾ ಜೈಲಿನಿಂದ ಯೋಧನನ್ನು ಬಿಡುಗಡೆ ಮಾಡಲಾಗಿದೆ.

Crpf Cobra Commander Sachin Savanth Released From Jail

ಸಿಆರ್ ಪಿಎಫ್ ಅಧಿಕಾರಿಗಳ ಜೊತೆ ತೋರಾಳಿ ಸಿಆರ್ ಪಿಎಫ್ ಕೋಬ್ರಾ ಟ್ರೈನಿಂಗ್ ಸೆಂಟರ್ ಗೆ ಕಳುಹಿಸಿಕೊಡಲಾಗಿದೆ. ಇದೇ ಸಂದರ್ಭ, ಪೊಲೀಸ್ ಅಧಿಕಾರಿಗಳ ಮೇಲೆ ದೂರು ದಾಖಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಆರ್ ಪಿಎಫ್ ಕೋಬ್ರಾ ಟ್ರೈನಿಂಗ್ ಸೆಂಟರ್ ಡೆಪ್ಯುಟಿ ಕಮಾಂಡೆಟ್ ರಘುನಾಥ್ ಉಪಾಧ್ಯ, ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+