ʼನಿನ್ನ ಬೆತ್ತಲೆಗೊಳಿಸಿ, ಮೆರವಣಿಗೆ ಮಾಡ್ತೀನಿ..ʼ ವೇದಿಕೆಯಲ್ಲೇ ವಾರ್ನಿಂಗ್‌ ಕೊಟ್ಟ ಶಾಸಕ

ಕಾಂಗ್ರೆಸ್‌ ಶಾಸಕರೊಬ್ಬರು ವೇದಿಕೆಯಲ್ಲೇ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಮಾಜಿ ಶಾಸಕರೊಬ್ಬರಿಗೆ ಹಾಲಿ ಶಾಸಕರು ಏಕವಚನದಲ್ಲಿ ವಾರ್ನ್‌ ಮಾಡಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಇಬ್ಬರು ನಾಯಕರ ಜಗಳವು ವೇದಿಕೆಯಲ್ಲೇ ಜನರೆದುರು ವಾರ್ನ್‌ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಹಾಲಿ ಶಾಸಕರಾದ ರಾಜು ಕಾಗೆ ಅವರು ಈ ರೀತಿ ಏಕವಚನದಲ್ಲೇ ಮತ್ತೊಬ್ಬ ನಾಯಕರಿಗೆ ವಾರ್ನಿಂಗ್‌ ಕೊಡುವ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದೇ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮಂತ ಪಾಟೀಲ್‌ ಹಾಗೂ ರಾಜು ಕಾಗೆ ನಡುವೆ ಬೇರೆ ಬೇರೆ ವಿಚಾರಗಳಿಗೆ ದ್ವೇಷವಿದ್ದು, ಇದೇ ಕಾರಣಕ್ಕೆ ಇಬ್ಬರ ನಡುವಿನ ಜಗಳ ಮುಂದುವರಿದಿದೆ.

Congress MLA Raju Kage Has Given a Warning To Former MLA

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಜು ಕಾಗೆ ಅವರು ವೇದಿಕೆ ಮೇಲೆಯೇ, ನನ್ನ ತಂಟೆಗೆ ಬಂದ್ರೆ, ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ,‌ ಮೆರವಣಿಗೆ ಮಾಡುತ್ತೇನೆʼ ಎಂದು ಶ್ರೀಮಂತ ಪಾಟೀಲ್‌ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸದ್ಯ ಈ ವಿಚಾರವು ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದೆ. ಅಲ್ಲದೆ, ರಾಜು ಕಾಗೆ ವಾರ್ನಿಂಗ್‌ ಕೊಟ್ಟಿರುವ ವಿಡಿಯೋ ಕೂಡ ವೈರಲ್‌ ಆಗಿದೆ.

ಕಾಗವಾಡ ತಾಲ್ಲೂಕಿನ ಐನಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜು ಕಾಗೆ ಅವರು ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ʼನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಇಲ್ಲ, ನೀನು ನನ್ನ ಬಗ್ಗೆ ಮಾತನಾಡ ಬೇಡ, ಒಂದು ವೇಳೆ ನನ್ನ ಬಗ್ಗೆ ನೀನು ಮಾತನಾಡಿದ್ದೇ ಆದರೆ, ನಾನು ನಿನ್ನ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Congress MLA Raju Kage Has Given a Warning To Former MLA

ಶ್ರೀಮಂತ ಪಾಟೀಲ್‌ ಬಗ್ಗೆ, ʼನೀನೇನು ಸತ್ಯ ಹರಿಶ್ಚಂದ್ರನ ಹಾಗೆ ಮಾತನಾಡುತ್ತಿದ್ದೀಯ? ಕಾರ್ಮಿಕರ ಹಣದಲ್ಲಿ ಹುಟ್ಟು ಹಬ್ಬ ಆಚರಿಸಿದವರು ಯಾರು? ಎಂದು ಜೋರುದನಿಯಲ್ಲೇ ಶಾಸಕ ಕೂಗಾಡಿದ್ದಾರೆ. ಈ ಹಿಂದೆ ರಾಜು ಕಾಗೆ ಅವರ ವಿರುದ್ಧ ಶ್ರೀಮಂತ ಪಾಟೀಲ್‌ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ವಿಚಾರವಾಗಿಯೇ ರಾಜು ಕಾಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಶಾಸಕ ಶ್ರೀಮಂತ ಪಾಟೀಲ್ ಈ ಹಿಂದೆ ರಾಜು ಕಾಗೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರಾಜು ಕಾಗೆ ಮಾಜಿ ಶಾಸಕ ಶ್ರೀಮಂತ್​ ಪಾಟೀಲ್​ ವಿರುದ್ಧ ಹರಿಹಾಯ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+