ಸ್ವಚ್ಛ ಭಾರತ ಅಭಿಯಾನಕ್ಕೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ

ಬೆಳಗಾವಿ, ಮಾರ್ಚ್ 31 : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಳಗಾವಿ ನಗರವನ್ನು ಮಾದರಿಯಾಗಿ ಮಾಡಲು ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಸಂಘಟನೆಗಳು ಕೈ ಜೋಡಿಸಿವೆ.

'ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಸಂಚಲನ ಸಮಿತಿ' ಹೆಸರಿನಲ್ಲಿ ಎಲ್ಲಾ ಸಂಘಟನೆಗಳು ಕೈ ಜೋಡಿಸಿದ್ದು, ಶಾಸಕ ಅಭಯ್ ಪಾಟೀಲ್ ಇದರ ಉಸ್ತುವಾರಿ ವಹಿಸಿದ್ದಾರೆ. 2017ರ ಅಕ್ಟೋಬರ್ ವೇಳೆಗೆ ನಗರವನ್ನು ಕಸ ರಹಿತ ನಗರವಾಗಿ ಮಾಡಿ, ಮಾದರಿ ನಗರವಾಗಿಸುವ ಗುರಿಯೊಂದಿಗೆ ಕೆಲಸ ಆರಂಭಿಸಲಾಗಿದೆ. [ಮೋದಿ ಆಫರ್ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ]

ಈ ಸಮಿತಿಯು ನಗರದಲ್ಲಿ ಸ್ವಚ್ಛತೆ ಕಾಪಾಡಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಜನರಿಗೂ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆರಂಭಿಸಿದೆ. ಶಾಲಾ ಮಕ್ಕಳನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ನಗರದ 260 ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. [ಅಂತೂ ಇಂತೂ ಸ್ವಚ್ಛವಾಯಿತು ವಿಕ್ಟೋರಿಯಾ ಆಸ್ಪತ್ರೆ]

swachh bharat

ಮಕ್ಕಳ ಮೂಲಕ ಅವರ ಮನೆಯಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಸಾರ್ವಜನಿಕರು ಸ್ವಚ್ಛತಾ ಅಭಿಯಾನದ ಕುರಿತು ನೀಡುವ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. ಕಸ ವಿಲೇವಾರಿ ಕುರಿತು ಈಗಾಗಲೇ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್‌ ಸಮೀಕ್ಷೆ ಕಾರ್ಯವನ್ನು ಆರಂಭಿಸಿವೆ. [ಸ್ವಚ್ಛ ಭಾರತ ಅಭಿಯಾನಕ್ಕೆ 'ಡನ್' ಎಂದ ಮಂಡ್ಯ]

ವಾರ್ಡ್ ಮಟ್ಟದಲ್ಲಿ ಕೆಲಸ : ಸ್ವಚ್ಛ ಬೆಳಗಾವಿ ಸಂಚಲನ ಸಮಿತಿ ವಾರ್ಡ್ ಮಟ್ಟದಲ್ಲಿ ಜನರನ್ನು ತೊಡಗಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ಮಾಡಲು ಯೋಜನೆ ರೂಪಿಸಿದೆ. ಇದಕ್ಕಾಗಿ ವಾರ್ಡ್ ಮಟ್ಟದಲ್ಲಿ ತಂಡವೊಂದನ್ನು ರಚಿಸಲಾಗುತ್ತದೆ. ಪ್ರತಿ ಭಾನುವಾರ ಒಂದು ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ.

ಮಹಾನಗರ ಪಾಲಿಕೆಗೆ ಮನವಿ : ಸ್ವಚ್ಛ ಬೆಳಗಾವಿ ಅಭಿಯಾನದಲ್ಲಿ ಕೈ ಜೋಡಿಸುವಂತೆ ಸಮಿತಿ ಬೆಳಗಾವಿ ಮಹಾನಗರ ಪಾಲಿಕೆಗೂ ಮನವಿ ಮಾಡಿದೆ. ಪೌರ ಕಾರ್ಮಿಕರಿಗೆ ಸ್ವಚ್ಛ ಕಾರ್ಮಿಕರು ಎಂದು ನಾಮಕರಣ ಮಾಡಿ ಅವರ ಕೆಲಸಗಳನ್ನು ಗುರುತಿಸಲು ಯೋಜನೆ ರೂಪಿಸಲಾಗಿದೆ.

ಜನ ಜಾಗೃತಿಗಾಗಿ ಬೀದಿ ನಾಟಕ : ಅಭಿಯಾನದಲ್ಲಿ ಕೈಜೋಡಿಸಿರುವ ವಿವಿಧ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛ ಬೆಳಗಾವಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಬ್ಯಾನರ್, ಭಿತ್ತಿಪತ್ರ ಮುಂತಾದವುಗಳ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ತಲುಪಿಸಲಿದ್ದಾರೆ.

ಡಿಸೆಂಬರ್ ತನಕ ಯೋಜನೆ ಸಿದ್ಧ : ಸ್ವಚ್ಛ ಬೆಳಗಾವಿ ಸಂಚಲನ ಸಮಿತಿ 2015ರ ಡಿಸೆಂಬರ್ ಅಂತ್ಯದವರೆಗೆ ಮಾಡಬೇಕಾದ ಕೆಲಸಗಳ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಅಭಯ್ ಪಾಟೀಲ್ ಹೇಳಿದ್ದಾರೆ.

ಅಭಿಯಾನದಲ್ಲಿರುವ ಶಾಲಾ ಕಾಲೇಜುಗಳು : 'ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಸಂಚಲನ ಸಮಿತಿ'ಯೊಂದಿಗೆ ಕೆಎಲ್‌ಇ, ಕೆಎಲ್‌ಎಸ್, ಜೈನ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್, ಎಸ್‌.ಜಿ.ಬಾಳೇಕುಂದ್ರಿ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳು ಈ ಅಭಿಯಾನಕ್ಕೆ ಕೈ ಜೋಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+