ಬೆಳಗಾವಿ : ಅನ್ನಭಾಗ್ಯ ಅಕ್ಕಿ ಮಾರಾಟ ಜಾಲ ಪತ್ತೆ, 10 ಟನ್ ಅಕ್ಕಿ ವಶ

ಬೆಳಗಾವಿ, ಜನವರಿ 11 : ಅನ್ನಭಾಗ್ಯ ಯೋಜನೆಯ ಹಲವು ಅವ್ಯವಹಾರಗಳು ಬೆಳಕಿಗೆ ಬಂದಿವೆ. ಬೆಳಗಾವಿಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಿಸಿಬಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 200ಚೀಲ, 10 ಟನ್ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ರೈಸ್ ಮಿಲ್ ನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಮಾರಲು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು.

ಬೆಳಗಾವಿಯ ಚೊಣ್ಣದ್ ರೈಸ್ ಮಿಲ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 200 ಚೀಲ ಅಕ್ಕಿ, 2 ವಾಹನ ವಶಕ್ಕೆ ಪಡೆದಿದ್ದು, ಮಿಲ್ ಅನ್ನು ಜಪ್ತಿ ಮಾಡಿದ್ದಾರೆ.

CCB police raid on rice mill, Anna Bhagya scheme rice sized

ರೈಸ್ ಮಿಲ್ ಮಾಲೀಕರು ಗೋಕಾರ, ಸವದತ್ತಿ ಸೇರಿದಂತೆ ಹಲವು ತಾಲೂಕಿನಿಂದ ಅಕ್ರವಾಗಿ ಅನ್ನಭಾಗ್ಯ ಅಕ್ಕಿಯನ್ನು ತಂದು ಪಾಲಿಶ್ ಮಾಡಿ, ಓಂ ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು.

ಸಂಕ್ರಾಂತಿ ವಿಶೇಷ ಪುಟ

ಆಹಾರ ಇಲಾಖೆ ಮತ್ತು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈಸ್ ಮಿಲ್ ಮಾಲೀಕ ರಾಜಶೇಖರ್ ಸೇರಿ ಮೂವರನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+