• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2 ಲಕ್ಷಕ್ಕೆ ಬೆಳಗಾವಿ ಮಗು ರಾಜಸ್ಥಾನದಲ್ಲಿ ಮಾರಾಟ

|

ಬೆಳಗಾವಿ, ಸೆ.3 : 2 ಲಕ್ಷ ರೂಪಾಯಿ ಹಣಕ್ಕಾಗಿ ಬಾಲಕಿಯನ್ನು ಮಾರಾಟ ಮಾಡಿರುವ ಪ್ರಕರಣವೊಂದು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ರಾಜಸ್ಥಾನ ಮೂಲದ ವ್ಯಕ್ತಿಗೆ ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಿರುವ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಾಲಕಿ ತಾಯಿ ದೂರು ನೀಡಿದ್ದು, ಮಗುವಿಗಾಗಿ ಹುಡುಕಾಟ ಆರಂಭವಾಗಿದೆ.

ಬೆಳಗಾವಿ ನಗರದ ಪಾಟೀಲ ಗಲ್ಲಿ ನಿವಾಸಿ ರುದ್ರಾಕ್ಷಿ ಅಲಿಯಾಸ್ ರಾಧಾ ಸತೀಶ ರೇವಣಕರ ಎಂಬುವವರು ರಾಜಸ್ಥಾನದ ಕೈಲಾಸ್ ಜೈನ್ ಹಾಗೂ ಮುಖೇಶ ಜೈನ್ ಎಂಬವವರಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಬಾಲಕಿ ತಾಯಿ ಕಾಳವ್ವ ದೂರು ನೀಡಿದ್ದಾರೆ.

ಕಾಳವ್ವ ಅವರ ಪತಿ ತೀರಿಕೊಂಡಿದ್ದು, ಆರ್ಥಿಕವಾಗಿ ಕುಟುಂಬ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಕಾಳವ್ವನಿಗೆ ಪರಿಚಯವಾದ ಆರೋಪಿ ರಾಧಾ ಸತೀಶ ಕಾಳವ್ವನ ಅಪ್ರಾಪ್ತ ಪುತ್ರಿಗೆ ಅಡುಗೆ ಕಲಿಸಿ, ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಕೊಡುವುದಾಗಿ ಹೇಳಿ ನಂಬಿಸಿ, ಆಕೆಯನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿ ಮಾರಾಟ ಮಾಡಿದ್ದಾಳೆ. [ಕಡು ಬಡತನ, ಕಂದಮ್ಮನನ್ನೇ ಮಾರಿದ ತಾಯಿ!]

15 ದಿನಗಳ ಹಿಂದೆ ಕಾಳವ್ವನ ಮಗಳ ಜೊತೆ ರಾಜಸ್ಥಾನದ ಬಾಡ್ಮೀರ ಗಾಮಕ್ಕೆ ಹೋಗಿದ್ದ ರಾಧಾ ಸತೀಶ ಕೈಲಾಸ್ ಜೈನ್ ಎಂಬ ವ್ಯಕ್ತಿಗೆ ಮಗುವನ್ನು ಒಪ್ಪಿಸಿ, 2.20 ಲಕ್ಷ ರೂ.ಹಣ ಪಡೆದಿದ್ದಾಳೆ ಎಂದು ಕಾಳವ್ವ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಮಾರಾಟವಾದ ಮಗುವ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ತನಗೆ ಇಲ್ಲಿ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಬಂದು ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾಳೆ. ಈ ಮಾಹಿತಿಯನ್ನು ಕಾಳವ್ವನಿಗೆ ತಿಳಿಸಿದ್ದು, ಮಾರ್ಕೆಟ್ ಠಾಣೆಯಲ್ಲಿ ದೂರು ಕಾಳವ್ವ ದೂರು ಸಲ್ಲಿಸಿದ್ದಾರೆ. ಬಾಲಕಿಯನ್ನು ರಕ್ಷಿಸಲು ವಿಶೇಷ ಪೊಲೀಸರ ತಂಡವೊಂದು ರಾಜಸ್ಥಾನಕ್ಕೆ ಶೀಘ್ರ ತೆರಳುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belgaum child sales for Rs 2 lakh for kailash Jain and Mukesh Jain who belongs to Rajasthan. Market police station of Belgaum registered the case and formed special team to rescue child according to compliant by the mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more