ಬೆಳಗಾವಿ-ಗೋವಾ ನಡುವೆ ಆ.16ರಿಂದ ರೈಲು ಸಂಚಾರ

ಬೆಳಗಾವಿ, ಆಗಸ್ಟ್ 06 : ನೈಋತ್ಯ ರೈಲ್ವೆ ಬೆಳಗಾವಿ-ಗೋವಾ ನಡುವೆ ರೈಲು ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ನೂತನ ರೈಲು ಸೇವೆಯ ಉದ್ಘಾಟನಾ ಸಮಾರಂಭ ಆಗಸ್ಟ್ 10ರಂದು ನಡೆಯಲಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಆಗಸ್ಟ್ 10ರಂದು ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಳಗಾವಿ-ವಾಸ್ಕೋ ನಡುವೆ ರೈಲುಗಳ ಸಂಚಾರ ಆಗಸ್ಟ್ 16ರಿಂದ ಆರಂಭವಾಗಲಿದೆ.

ಆಗಸ್ಟ್ 16ರಂದು ಬೆಳಗಾವಿಯಿಂದ ಮೊದಲ ರೈಲಯ ಸಂಚಾರ ಆರಂಭಿಸಲಿದೆ. ವಾರಕ್ಕೆ ಎರಡು ಬಾರಿ ಬೆಳಗಾವಿ-ವಾಸ್ಕೋ ನಡುವೆ ರೈಲು ಸಂಚಾರ ನಡೆಸಲಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಈ ಸಂಚಾರ ನಡೆಯಲಿದೆ.

Belagavi Vasco Train Service From August 16

ಈ ಹೊಸ ರೈಲು ಸಂಚಾರದಿಂದಾಗಿ ಬೆಳಗಾವಿ ಮತ್ತು ಗೋವಾದಲ್ಲಿ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ದಿಯಾಗಲಿದೆ ಎಂಬ ನಿರೀಕ್ಷೆಯನ್ನು ರೈಲ್ವೆ ಇಲಾಖೆ ಹೊಂದಿದೆ.

ಬೆಳಗಾವಿ-ಗೋವಾ ನಡುವೆ ಪ್ರತಿನಿತ್ಯದ ವ್ಯಾಪಾರ ವಹಿವಾಟು ಹೆಚ್ಚಿಗೆ ನಡೆಯುತ್ತದೆ. ಬೆಳಗಾವಿಯ ಹಲವು ಜನರು ದಿನನಿತ್ಯದ ಕೆಲಸಕ್ಕಾಗಿ ಗೋವಾಕ್ಕೆ ತೆರಳುತ್ತಾರೆ.

ವೇಳಾಪಟ್ಟಿ : ರೈಲು ಬೆಳಗ್ಗೆ 6.20ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, 12.40ಕ್ಕೆ ವಾಸ್ಕೋ ತಲುಪಲಿದೆ. ಮಧ್ಯಾಹ್ನ 3.55ಕ್ಕೆ ವಾಸ್ಕೋದಿಂದ ಹೊರಡಲಿದ್ದು, ರಾತ್ರಿ 9.25ಕ್ಕೆ ಬೆಳಗಾವಿಗೆ ವಾಪಸ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+