ಕಾಂಗ್ರೆಸ್ ಮಾಜಿ ಪ್ರಧಾನಿಗಳ ಬಗ್ಗೆ ನಟಿ ತಾರಾ ವಿವಾದಾತ್ಮಕ ಹೇಳಿಕೆ
Recommended Video

ಬೆಳಗಾವಿ, ಮಾರ್ಚ್ 24: ಕಾಂಗ್ರೆಸ್ ಪಕ್ಷದಲ್ಲಿ ಬರ್ತ್ ಸರ್ಟಿಫಿಕೇಟ್ ಮತ್ತು ಡೆತ್ ಸರ್ಟಿಫಿಕೇಟ್ ಇದ್ದರೆ ಸಾಕು ಪ್ರಧಾನ ಮಂತ್ರಿ ಆಗಬಹುದು ಎಂದು ವಿಧಾನ ಪರಿಷತ್ ಸದಸ್ಯೆ, ನಟಿ ತಾರಾ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬೆಳಗಾವಿಯ ಮಿಲೆನಿಯಂ ಗಾರ್ಡನ್ ನಲ್ಲಿ ಎಬಿವಿಪಿ ಏರ್ಪಡಿಸಿದ್ದ ರಂಗದೇ ಬಸಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿ ಆದರು, ನಂತರ ಇಂದಿರಾ ಅವರ ಡೆತ್ ಸರ್ಟಿಫಿಕೇಟ್ ಪಡೆದು ರಾಜೀವ್ ಗಾಂಧಿ ಪ್ರಧಾನಿ ಆದರು ನಂತರ ರಾಜೀವ್ ಗಾಂಧಿ ಡೆತ್ ಸರ್ಟಿಫಿಕೇಟ್ ಪಡೆದು ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷೆ ಆದರು ಈಗ ಸೋನಿಯಾರಿಂದ ಬರ್ತ್ ಸರ್ಟಿಫಿಕೇಟ್ ಪಡೆದು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ ಈ ರೀತಿಯ ಸರ್ಟಿಫಿಕೇಟ್ ಸಂಸ್ಕೃತಿ ಬಿಜೆಪಿಯಲ್ಲಿಲ್ಲ ಎಂದ ತಾರಾ ಬಿಜೆಪಿಯಲ್ಲಿ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗೇರಬಹುದು ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಉದಾಹರಣೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಧರ್ಮಗಳನ್ನು ಒಡೆಯುವ ಸಂಸ್ಕೃತಿ ಆರಂಭವಾಗಿದ್ದು, ಇದರ ವಿರುದ್ಧ ಎಬಿವಿಪಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಅವರು ಕಿವಿ ಮಾತು ಹೇಳಿದರು.












Click it and Unblock the Notifications