ಬೆಳಗಾವಿ: ಅಣ್ಣನ ಮೇಲಿನ ದ್ವೇಷಕ್ಕೆ ಆತನ ಮಗಳನ್ನು ಕೊಂದ ಚಿಕ್ಕಪ್ಪ
ಬೆಳಗಾವಿ, ಆಗಸ್ಟ್ 07: ಅಣ್ಣನ ಮೇಲಿನ ಸಿಟ್ಟಿಗೆ ಪುಟ್ಟ ಬಾಲಕಿಯನ್ನು ಚಿಕ್ಕಪ್ಪನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಿನ್ನೆ ತನ್ನ ಸ್ವಂತ ಅಣ್ಣನ ಮಗಳನ್ನೆ ನಿಷ್ಕರುಣಿ ಚಿಕ್ಕಪ್ಪ ಕುಡುಗೋಲಿನಿಂದ ಕತ್ತರಿಸಿ ಹತ್ಯೆ ಮಾಡಿದ್ದಾನೆ.
ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಬಾಲಕಿ ಪ್ರೇಮಾಳ ಹೊಸಮನಿಯ ಕತ್ತಿಗೆ ಕುಡಗೋಲಿನಿಂದ ಬೀಸಿರುವ ಚಿಕ್ಕಪ್ಪ ಮಲ್ಲಪ್ಪ ಹೊಸಮನಿ ಬಾಲಕಿಯ ಜೀವ ತೆಗೆದಿದ್ದಾನೆ.

ಅಣ್ಣನ ಮೇಲಿನ ಸೇಡಿನಿಂದಾಗಿ ಮಲ್ಲಪ್ಪ, ಅಣ್ಣನ ಮಗಳು ಪ್ರೇಮಾಳನ್ನು ಕೊಂದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿದ ನಂತರ ಎಲೆ ಅಡಿಕೆ ಜಗಿಯುತ್ತಾ ಊರ ಜನರೊಂದಿಗೆ ಮಾತನಾಡುತ್ತಿರುವ ಮಲ್ಲಪ್ಪನ ವಿಡಿಯೋ ಹರಿದಾಡುತ್ತಿದ್ದು, 'ಬಾಲಕಿಯನ್ನು ಕಡಿದದ್ದು (ಕೊಂದದ್ದು) ನಿಜ, ಅವರು ಕೈಗೆ ಸಿಕ್ಕಿದ್ದರೆ ಅವರನ್ನೂ ಕಡಿಯುತ್ತಿದ್ದೆ' ಎಂದು ಆರಾಮವಾಗಿ ಹೇಳುತ್ತಿರುವುದು, ಅವನಲ್ಲಿ ಮಡುಗಟ್ಟಿದ ಕ್ರೌರ್ಯವನ್ನು ತೋರುತ್ತಿದೆ.












Click it and Unblock the Notifications