ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ಬೆಳಗಾವಿಯ 6 ಮಂದಿಗೆ ಕೊರೊನಾ
ಬೆಳಗಾವಿ, ಏಪ್ರಿಲ್ 25: ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಕೊರೊನಾ ಸೋಂಕು ಹರಡಿದೆ. ಈ ಪೈಕಿ ಹಿರೇಬಾಗೇವಾಡಿಯ ಅಂಗನವಾಡಿ ಕಾರ್ಯಕರ್ತೆ ಒಬ್ಬರರಿಗೂ ಸೋಂಕು ಹರಡಿರುವುದು ದೃಢವಾಗಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
P-128 ರೋಗಿ ಗುಣಮುಖವಾಗಿ ಮನೆಗೆ ತೆರಳಿದ್ದಾರೆ. ಇವರು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಸೋಂಕಿತ. ಆದರೆ, ಇವರ ದ್ವಿತೀಯ ಸಂಪರ್ಕದಲ್ಲಿದ್ದ ಆರು ಜನರಿಗೆ ಇದೀಗ ಕೊರೊನಾ ಸೋಂಕು ದೃಢವಾಗಿದೆ.
P-482 - 45 ವರ್ಷದ ಪುರುಷ
P-483 - 38 ವರ್ಷದ ಪುರುಷ
P-484 - 80 ವರ್ಷದ ವೃದ್ಧೆ
P-485 - 55 ವರ್ಷದ ಮಹಿಳೆ
P-486 - 42 ವರ್ಷದ ಮಹಿಳೆ
P- 487 - 39 ವರ್ಷದ ಮಹಿಳೆ (ಅಂಗನವಾಡಿ ಕಾರ್ಯಕರ್ತೆ)

ಹಿರೇಬಾಗೇವಾಡಿ ಒಂದೇ ಗ್ರಾಮದಲ್ಲೇ 22 ಜನರಿಗೆ ಕೊರೊನಾ ಸೋಂಕು ಹರಿದೆ. P-128 ಅದೇ ಗ್ರಾಮದ ವ್ಯಕ್ತಿಯಾಗಿದ್ದು, ಆ ಗ್ರಾಮದಲ್ಲಿ ಸೋಂಕು ಹಬ್ಬಿದೆ. ಈ ಗ್ರಾಮದ ಅಂಗನವಾಡಿ ಶಿಕ್ಷಕಿಯಲ್ಲಿಯೂ ಕೊರೊನಾ ದೃಢವಾಗಿದೆ.
ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮನೆಗೆ ಸರ್ವೇ ಮಾಡಲು ಅಂಗನವಾಡಿ ಶಿಕ್ಷಕಿ ಹೋಗಿದ್ದ ವೇಳೆ ಸೋಂಕು ಹರಡಿದೆ. ಅಂಗನವಾಡಿ ಶಿಕ್ಷಕಿ ಹಿರೇಬಾಗೇವಾಡಿಯಲ್ಲಿ 94 ಮನೆಗಳ ಸರ್ವೇ ಮಾಡಿದ್ದರು. ಹೊಸ ಪ್ರಕರಣಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೊಂಕು 50ರ ಗಡಿ ದಾಟಿದೆ.












Click it and Unblock the Notifications