ನಮ್ಮ ಮೆಟ್ರೋ ಸುರಂಗ ಸಂಚಾರ ಲೋಕಾರ್ಪಣೆ

Subscribe to Oneindia Kannada

ಬೆಂಗಳೂರು, ಏಪ್ರಿಲ್, 30: ಎಲ್ಲೆಲ್ಲೂ ಸಂಭ್ರಮ, ನಮ್ಮ ಮೆಟ್ರೋ ಸಿಬ್ಬಂದಿ ಮುಖದಲ್ಲಿ ಲೋಕ ಜಯಿಸಿದ ತೃಪ್ತಿ, ವಿಧಾನ ಸೌಧದ ಎದುರು ರಂಗು ರಂಗಿನ ವಾತಾವರಣ, ಬೆಂಗಳೂರು ನಾಗರಿಕರಿಗೆ ಐತಿಹಾಸಿಕ ದಿನ...

ಹೌದು... ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆಯಾಗಿದೆ. ಬೆಂಗಳೂರು ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್​ನ 4.82 ಕಿ.ಮೀ. (ಕಬ್ಬನ್ ಉದ್ಯಾನ ನಿಲ್ದಾಣದಿಂದ ನಗರ ರೈಲ್ವೆ ನಿಲ್ದಾಣ) ಸುರಂಗ ಮಾರ್ಗದಲ್ಲಿ ರೈಲು ಓಡಾಟ ಆರಂಭವಾಗಿದೆ.[ನಮ್ಮ ಮೆಟ್ರೋ ಸುರಂಗ ಮಾರ್ಗದ ವಿಶೇಷತೆಗಳು]

metro

ಮೆಟ್ರೋ ಸುರಂಗ ಸಂಚಾರಕ್ಕೆ ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಚಾಲನೆ ನೀಡಿದರು. ಪರಿಣಾಮ ಮೈಸೂರು ರಸ್ತೆಯ ನಾಯಂಡಹಳ್ಳಿ ಮತ್ತು ಹಳೇ ಮದ್ರಾಸ್‌ ರಸ್ತೆಯ ಬೈಯಪ್ಪನಹಳ್ಳಿಗೆ ನೇರ ಸಂಪರ್ಕ ಲಭಿಸಿದಂತಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೂ ಸಂಪರ್ಕ ಸಿಕ್ಕಿದ್ದು ನಾಗರಿಕರಿಗೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ.[ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]

18 ಕಿಮೀ ಉದ್ದದ ಮೆಟ್ರೋ ಮೊದಲ ಹಂತದ ಕಾರಿಡಾರ್‌ (ಪೂರ್ವ-ಪಶ್ಚಿಮ) ಲೋಕಾರ್ಪಣೆಯಾಗಿದೆ. ನಮ್ಮ ಮೆಟ್ರೋ ಮೂರನೇ ಹಂತವನ್ನೂ ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು. ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ಮೊದಲ ಹಂತವನ್ನು ಸಂಪೂರ್ಣವಾಗಿ ಮುಗಿಸಲಾಗುವುದು ಎಂಬ ಭರವಸೆಯನ್ನು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ನೀಡಿದರು.

ನಮ್ಮ ಮೆಟ್ರೋ ಸುರಂಗ ಸಂಚಾರದ ಚಿತ್ರಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister for Urban Development and Parliamentary Affairs M Venkaiah Naidu and Karnataka Chief Minister Siddaramaiah on Friday evening flagged off the first ever-operational underground metro of South India from the grand stairs of Vidhana Soudha in Bengaluru.
Please Wait while comments are loading...