ಒಳ್ಳೆ ಸಲಹೆಗಾರರಿಲ್ಲದಿದ್ದರೆ ಮೋದಿ ಕನಸು ನನಸಾಗದು: ಸಿಎನ್ನಾರ್ ರಾವ್

Posted By:
Subscribe to Oneindia Kannada

ಬೆಂಗಳೂರು, ಜ. 10: ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಮಹತ್ವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಮೋದಿ ಅವರ ಕನಸು ನನಸಾಗಬೇಕಾದರೆ ಅವರಿಗೆ ಸೂಕ್ತ ಸೂಕ್ತ ವೈಜ್ಞಾನಿಕ ಸಲಹೆಗಾರರ ಅಗತ್ಯವಿದೆ ಎಂದು ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿಎನ್‌ಆರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿಯವರ ಯೋಜನೆಗಳು, ದೇವರು, ಧರ್ಮ, ಭಾರತದಲ್ಲಿನ ಅಸಹಿಷ್ಣುತೆ ಬಗ್ಗೆ ಚರ್ಚೆ, ಮದರ್ ತೆರೆಸಾ ಅವರ ಸಂತ ಪದವಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಶ್ನೋತ್ತರದ ಮುಖ್ಯಾಂಶಗಳು ಮುಂದಿದೆ: [ಭಾರತ ರತ್ನ ಸಿಎನ್ಆರ್ ರಾವ್ ವ್ಯಕ್ತಿ ಚಿತ್ರ]

* ಪ್ರಧಾನಿ ನರೇಂದ್ರ ಮೋದಿ ಅವರ ವೈಜ್ಞಾನಿಕ ದೃಷ್ಟಿಕೋನ, ಯೋಜನೆ ಬಗ್ಗೆ ಹೇಳಿ?

ಮೋದಿ ಅವರು ದೂರದೃಷ್ಟಿಯ ಹಲವು ಮಹತ್ವದ ಯೋಜನೆಗಳ ಸಾಕಾರ ಮತ್ತು ಅವುಗಳನ್ನು ಆಂದೋಲನದ ರೀತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ವೈಜ್ಞಾನಿಕ ಸಲಹೆಗಾರರ ಅಗತ್ಯವಿದೆ.

ನರೇಂದ್ರ ಮೋದಿಯವರು ವಾಸ್ತವವಾಗಿ ನಿಜಕ್ಕೂ ತಮ್ಮದೇ ಆದ ಸೃಜನಾತ್ಮಕ ದೂರದೃಷ್ಟಿ ಹೊಂದಿದವರು. ಈ ದೇಶದ ಜನತೆ ಏನನ್ನಾದರೂ ಒಳಿತನ್ನು ಮಾಡಲೇಬೇಕು ಎಂಬ ಸ್ಪಷ್ಟ ಪರಿಕಲ್ಪನೆ ಹೊಂದಿದವರು. ಅವರಲ್ಲಿ ಅದ್ಭುತವಾದ ಆಲೋಚನೆಗಳಿವೆ. ಅಷ್ಟೇ ಅಲ್ಲದೆ ತಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸುವ ಛಾತಿಯನ್ನು ಹೊಂದಿದ್ದಾರೆ. ಅವರು ಹೇಳುವುದೆಲ್ಲವೂ ವಾಸ್ತವಿಕವಾದದ್ದು ಮತ್ತು ನಿಖರತೆಯಿಂದ ಕೂಡಿದ್ದಾಗಿದೆ. ಇನ್ನಷ್ಟು ಪ್ರಶ್ನೆಗಳು ಹಾಗೂ ಉತ್ತರ ಮುಂದಿದೆ...

ಮೋದಿಯವರು ಸರಿಯಾದ ವೈಜ್ಞಾನಿಕ ಸಲಹೆ

ಮೋದಿಯವರು ಸರಿಯಾದ ವೈಜ್ಞಾನಿಕ ಸಲಹೆ

ಖಂಡಿತಾ ಪ್ರಧಾನಿ ಮೋದಿ ಅವರು ಸೂಕ್ತ ಸಲಹೆಗಳಿಗಾಗಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿ, ಒಂದು ಸಚಿವಾಲಯದಿಂದ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಕ್ಷಣಕ್ಕೆ ನಿಭಾಯಿಸಲು ಸಾಧ್ಯವಿಲ್ಲ. ಸಂದರ್ಭೋಚಿತವಾದ ವೈಜ್ಞಾನಿಕ ಸಲಹೆಗಳ ಮೂಲಕ ನಾವು ಬಡತನ ತೊಲಗಿಸಬಹುದು ಮತ್ತು ಅಭಿವೃದ್ಧಿ ಮತ್ತು ಸುಧಾರಣೆಗಳಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳ ಜೊತೆ ಸ್ಪರ್ಧೆಗಿಳಿಯಬಹುದು.

ಯಾವುದಕ್ಕೆ ಪ್ರಮುಖ ಆದ್ಯತೆ ನೀಡಬೇಕು ತಿಳಿದಿರಲಿ

ಯಾವುದಕ್ಕೆ ಪ್ರಮುಖ ಆದ್ಯತೆ ನೀಡಬೇಕು ತಿಳಿದಿರಲಿ

ಮೋದಿಯವರ ದೂರಾಲೋಚನೆಗಳು, ಕಲ್ಪನೆಗಳ ಕುರಿತಂತೆ ಮಾತನಾಡಿರುವ ಅವರು, ನೀವು ಹಲವು ಪ್ರಧಾನಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ಕೆಲಸ ಮಾಡಿದ್ದೀರಿ, ಮೋದಿಯವರು ಸರಿಯಾದ ವೈಜ್ಞಾನಿಕ ಸಲಹೆ ಪಡೆಯುತ್ತಿದ್ದಾರೆಯೇ?

ಪ್ರಧಾನಿ ಮೋದಿ ಯಾವುದಕ್ಕೆ ನಾವು ಪ್ರಮುಖ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಪ್ರಧಾನಿ ಮೋದಿ ಅವರು ಸ್ಪಷ್ಟ ನಿಲುವು ತಳೆಯುವ ಮತ್ತು ಅದನ್ನು ಮನವರಿಕೆ ಮಾಡಿಕೊಳ್ಳುವ ಅಗತ್ಯವಿದೆ. ಹಾಗಾಗಿ ಮೋದಿ ಸರಿಯಾದ ವೈಜ್ಞಾನಿಕ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ, ಸಲಹೆ ನೀಡುವ ಸರಿಯಾದ ವ್ಯಕ್ತಿಗಳು ಬೇಕಾಗಿದೆ.

ವಿಜ್ಞಾನ ಬೆಳೆವಣಿಗೆಗೆ ಮೋದಿ ಹೇಗೆ ನೆರವಾಗಬಹುದು?

ವಿಜ್ಞಾನ ಬೆಳೆವಣಿಗೆಗೆ ಮೋದಿ ಹೇಗೆ ನೆರವಾಗಬಹುದು?

ಆಧುನಿಕ ವಿಜ್ಞಾನದ ಬಳಕೆಗೆ ಸೂಕ್ತವಾದ ನಿಧಿಯ ಅಗತ್ಯವಿದೆ. ಅಗತ್ಯಕ್ಕೆ ತಕ್ಕಂತೆ ಸಣ್ಣ ಮೊತ್ತದ ನಿಧಿ ಕೂಡ ಲಭ್ಯವಾಗುವುದಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ನನ್ನದೇ ಅನುಭವದಲ್ಲಿ ಹೇಳುವುದಾದರೆ, ಕೇವಲ 10-20 ಕೋಟಿಯಷ್ಟು ಸಣ್ಣ ಮೊತ್ತದ ನಿಧಿಯನ್ನೂ ನಾವು ನಮ್ಮ ಸರ್ಕಾರಗಳಿಂದ ಪಡೆದಿಲ್ಲ. ಬೇರೆ ಕಡೆಯಿಂದ ಪಡೆದು ಕಾರ್ಯ ನಿರ್ವಹಿಸಿದ್ದೇವೆ.

ಇಂದು ದೇಶಕ್ಕೆ ಅಂತಹ ವೈಜ್ಞಾನಿಕ ಮಿಷನ್‌ಗಳ ಅಗತ್ಯ

ಇಂದು ದೇಶಕ್ಕೆ ಅಂತಹ ವೈಜ್ಞಾನಿಕ ಮಿಷನ್‌ಗಳ ಅಗತ್ಯ

ಈ ನಿಟ್ಟಿನಲ್ಲಿ ಸರ್ಕಾರ 5-6 ಮಿಷನ್‌ಗಳನ್ನು ಸಂಘಟಿಸಬೇಕು. ದೇಶಕ್ಕೆ ಮಾರಕವಾಗಿರುವ ಅನಕ್ಷರತೆ, ಬಡತನ, ಮಲೇರಿಯಾಗಳಂತಹ ಪಿಡುಗುಗಳನ್ನು ಮೂಲೋತ್ಪಾಟನೆ ಮಾಡಲು ಇಂತಹ ಮಿಷನ್‌ಗಳ ಅಗತ್ಯವಿದೆ ಎಂದು ರಾವ್ ಸಲಹೆ ನೀಡಿದ್ದಾರೆ. ವಿಜ್ಞಾನವು ಬಡ ಜನರು ಹಾಗೂ ಇಡೀ ಸಮಾಜದ ಸುಧಾರಣೆಗೆ ಬಳಕೆಯಾಗಬೇಕೆಂದರೆ ವೈಜ್ಞಾನಿಕವಾಗಿ ಯೋಜನೆಗಳ ಅನುಷ್ಠಾನವಾಗಬೇಕು.

ತೆರೆಸಾ ಅವರನ್ನು ಸಂತ ಪದವಿಗೇರಿಸುವುದರ ಬಗ್ಗೆ?

ತೆರೆಸಾ ಅವರನ್ನು ಸಂತ ಪದವಿಗೇರಿಸುವುದರ ಬಗ್ಗೆ?

ಪವಾಡಗಳನ್ನು ನಂಬಿ, ತೆರೆಸಾ ಅವರನ್ನು ಸಂತ ಪದವಿಗೇರಿಸುವುದರ ಬಗ್ಗೆ?
ಪೋಪ್ ಅವರು ಚರ್ಚ್ ಕಾರ್ಯ ನಿರ್ವಹಣೆ ತಕ್ಕಂತೆ ತೆರೆಸಾ ಅವರ ಸಂತ ಪದವಿ ಕ್ರಿಯೆ ಮುಂದುವರೆಸಿದ್ದಾರೆ. ಪೊಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸ್ ಗೂ ಸಂತರಿಗೂ ಸಂಬಂಧವಿಲ್ಲ ಎಂದು ವಿಜ್ಞಾನಿ ಸಿಎನ್ನಾರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಪವಾಡಗಳನ್ನು ನೀವು ನಂಬುತ್ತೀರಾ?

ಪವಾಡಗಳನ್ನು ನೀವು ನಂಬುತ್ತೀರಾ?

ಪವಾಡಗಳನ್ನು ನಾನು ನಂಬುವುದಿಲ್ಲ, ಆದರೆ, ಭಾರತದಲ್ಲಿ ಧರ್ಮ, ನಂಬಿಕೆ, ಮೂಢನಂಭಿಕೆ ಹಾಗೂ ವಿಜ್ಞಾನದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಜನರು ನಂಬಿಕೆಗೆ ಅನುಸಾರವಾಗಿ ನಡೆಯಬೇಕು ಎಂದಷ್ಟೇ ಹೇಳಬಲ್ಲೆ. ಭೌತವಿಜ್ಞಾನದ ನಿಯಮಗಳ ಮೇಲೆ ನಂಬಿಕೆ ಇದ್ದರೆ ಮಾತ್ರ ಸಿದ್ಧಾಂತ ರೂಪಿಸಿ ಬೆಳೆಸಲು ಸಾಧ್ಯ.
ಅದೇ ರೀತಿ ದೇವರು ಹಾಗೂ ತತ್ವ ಶಾಸ್ತ್ರದಲ್ಲಿ ನಂಬಿಕೆ ಇದ್ದರೆ ನಾನು ಅದಕ್ಕೆ ವಿರೋಧಿಯಲ್ಲ. ಅದರೆ, ನಿಮ್ಮ ನಂಬಿಕೆ ಮೂಢನಂಬಿಕೆಯಾಗಿ ಸಮಾಜಕ್ಕೆ ಮಾರಕವಾಗಬಾರದು. ಐನ್ ಸ್ಟೈನ್ ಕೂಡಾ ನಂಬಿಕೆ ಬಗ್ಗೆ ಇದೇ ಅಭಿಪ್ರಾಯ ಹೊಂದಿದ್ದರು.

 ಧರ್ಮ ಹಾಗೂ ವಿಜ್ಞಾನ ಎರಡು ಮಿಶ್ರಣವಾಗಬಾರದೇ?

ಧರ್ಮ ಹಾಗೂ ವಿಜ್ಞಾನ ಎರಡು ಮಿಶ್ರಣವಾಗಬಾರದೇ?

ಇಲ್ಲ, ಸಮತೋಲನ ಸಾಧಿಸಲು ಸಾಧ್ಯವಿಲ್ಲ. ಖಂಡಿತಾವಾಗಿ ಲೋಕವಿರೋಧಿಯಾಗಬೇಕಾಗುತ್ತದೆ. ಇಲ್ಲವೇ ಧರ್ಮ ನಂಬಿಕೆಗೆ ದಾಸರಾಗಿ ಬಾಳಬೇಕಾಗುತ್ತದೆ. ಯಾವುದೇ ಆದರೂ ಅತಿಯಾದರೆ ಅಸಹಿಷ್ಣುತೆ ಉಂಟಾಗುತ್ತದೆ.

ಭಾರತ ಅಸಹಿಷ್ಣುತೆಯತ್ತ ವಾಲುತ್ತಿದೆಯೆ?

ಭಾರತ ಅಸಹಿಷ್ಣುತೆಯತ್ತ ವಾಲುತ್ತಿದೆಯೆ?

ಖಂಡಿತಾವಾಗಿ ಇಲ್ಲ, ಭಾರತದಲ್ಲಿ ಅಸಹಿಷ್ಣುತೆ ಸ್ಥಿತಿಯತ್ತ ಸಾಗುತ್ತಿಲ್ಲ. ಸಮಾಜದಲ್ಲಿ ಕೆಲ ಅಸಹಿಷ್ಣುತೆ ಪರಿಸ್ಥಿತಿ ಎದುರಾಗಬಹುದು. ಆದರೆ, ಅದೃಷ್ಟವಶಾತ್ ಭಾರತದ ಬಹುತೇಕ ಮಂದಿ ಸಹಿಷ್ಣುಗಳಾಗಿದ್ದು, ವಿಜ್ಞಾನ, ಧರ್ಮ ಎಲ್ಲವನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವ ಹೊಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi needs the right scientific advice to turn his vision to reality and should also start mission-mode projects, feels India's Bharat Ratna-winning scientist CNR Rao.
Please Wait while comments are loading...