ನಮ್ಮ ಮೆಟ್ರೋ ಮೊದಲ ಹಂತ ಮೇ ಅಂತ್ಯಕ್ಕೆ ಸಂಪೂರ್ಣ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಆರು ವರ್ಷಗಳ ಸುದೀರ್ಘ ವಿಳಂಬದ ನಂತರ ನಮ್ಮ ಮೆಟ್ರೋ ಮೊದಲ ಹಂತ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಹೇಳಿದೆ.

ಉತ್ತರ ಕಾರಿಡಾರ್ ನ ಸಂಪಿಗೆ ರಸ್ತೆಯಿಂದ ಮತ್ತು ದಕ್ಷಿಣ ಕಾರಿಡಾರ್ ನ ನ್ಯಾಶನಲ್ ಕಾಲೇಜಿನಿಂದ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸುವ ಗ್ರೀನ್ ಲೈನ್ ಸುರಂಗ ಮಾರ್ಗ ಇದಾಗಿದ್ದು, ಏಪ್ರಿಲ್ ಅಂತ್ಯದ ಹೊತ್ತಿಗೆ ಇದು ಕಾರ್ಯಾರಂಭ ಮಾಡಲಿದೆ ಎಂದು ಬಿಎಂಆರ್ ಸಿಎಲ್ ಈ ಮೊದಲೇ ತಿಳಿಸಿತ್ತು.[ಏಪ್ರಿಲ್ ವೇಳೆಗೆ ಉತ್ತರ, ದಕ್ಷಿಣ ಬೆಂಗಳೂರು ನಡುವೆ ಮೆಟ್ರೋ ಸಂಪರ್ಕ ?]

Namma Metro phase 1 could be fully open in May end

ಬಿಎಂಆರ್ ಸಿಎಲ್ ತಾನೇ ಹಾಕಿಕೊಂಡಿದ್ದ ಏಳು ಡೆಡ್ ಲೈನ್ ಗಳನ್ನು ತಲುಪುವಲ್ಲಿ ವಿಫಲವಾಗಿದ್ದು, ಮೆಟ್ರೋ ಕಾಮಗಾರಿ 6 ವರ್ಷಗಳ ಸುದೀರ್ಘ ವಿಳಂಬದ ನಂತರ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಜನವರಿ 2017 ರ ಹೊತ್ತಿಗೆ ಮೆಟ್ರೋ ಕಾಮಗಾರಿಗಾಗಿ ವೆಚ್ಚವಾದ ಹಣ 14,292 ಕೋಟಿ ರೂ. ಅಂದರೆ, 2006 ರಲ್ಲಿ ಮೆಟ್ರೋ ಕಾಮಗಾರಿಗಾಗಿ ಬಿಡುಗಡೆಯಾಗಿದ್ದ 6,395 ಕೋಟಿ ರೂಪಾಯಿಯ ಎರಡು ಪಟ್ಟಿಗಿಂತ ಹೆಚ್ಚು ಹಣ ಖರ್ಚಾಗಿದೆ.[ಉತ್ತರ-ದಕ್ಷಿಣ ಬೆಸೆಯುವ ಮೆಟ್ರೋ ಸುರಂಗ ಮಾರ್ಗದ ಟ್ರಯಲ್ ರನ್ ಶುರು!]

ಕೇಂದ್ರ ರೈಲ್ವೆ ಸುರಕ್ಷತೆ ಆಯುಕ್ತರ ಬಳಿಯಿಂದ ಅನುಮತಿ ಪಡೆದ ನಂತರ ಮೆಟ್ರೋ ಮೊದಲ ಹಂತದ ಸಂಚಾರ ಆರಂಭವಾಗಲಿದೆ. ಈಗಾಗಲೇ ಈ ಭಾಗದಲ್ಲಿ ಟ್ರಯಲ್ ರನ್ ಆರಂಭವಾಗಿದ್ದು, ಮೆಟ್ರೋ ಪರ್ಪಲ್ ಲೈನ್ (ನಾಯಂಡ ಹಳ್ಳಿ - ಬೈಯಪ್ಪನಹಳ್ಳಿ) ನ ಉಪಯೋಗ ಪಡೆಯುತ್ತಿರುವ ಜನರಿಗಿಂತ ಮೂರು ಪಟ್ಟು ಹೆಚ್ಚು ಜನ ಗ್ರೀನ್ ಲೈನ್ ಉಪಯೋಗ ಪಡೆಯಲಿದ್ದಾರೆ.

ಬಿಎಂಆರ್ ಸಿಎಲ್ ಉದ್ದೇಶಿತ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ 24 ಕಿಲೋಮೀಟರ್ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ 8 ಕಿಲೋಮೀಟರ್ ಸಂಚಾರಕ್ಕಾಗಿ ಪ್ರಯಾಣಿಕರು ಕಾದಿದ್ದಾರೆ. ಅದರಲ್ಲೂ ಮೆಜೆಸ್ಟಿಕ್, ಚಿಕ್ಕಪೇಟೆ ಹಾಗೂ ಕೆ.ಆರ್. ಮಾರ್ಕೆಟ್ ಸುರಂಗ ಮಾರ್ಗದಲ್ಲಿ ಮೆಟ್ರೋ ಸಂಚಾರ ಅಧಿಕೃತವಾಗಿ ಆರಂಭವಾಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After 6 years delay and missing 7 deadlines, Namma Metro phase 1 could be fully open in May end, BMRCL offocial told. BMRCL has spent 14,292 crore rupees till January of this year for Namma Metro project.
Please Wait while comments are loading...