ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.20ರಂದು ಬೆಂಗಳೂರಲ್ಲಿ ಮಿಡ್‌ನೈಟ್ ಮ್ಯಾರಥಾನ್‌

By Kiran B Hegde
|
Google Oneindia Kannada News

ಬೆಂಗಳೂರು, ಡಿ. 9: ನಗರದಲ್ಲಿ ರೋಟರಿ ಬೆಂಗಳೂರು ಐಟಿ ಕಾರಿಡಾರ್ ಕ್ಲಬ್ ಈ ವರ್ಷ ಆಯೋಜಿಸಿರುವ ಮಿಡ್‌ನೈಟ್ ಮ್ಯಾರಥಾನ್ ಓಟದಲ್ಲಿ ಸುಮಾರು 15 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.

ಡಿ. 20ರಂದು ಆಯೋಜಿಸಿರುವ ಮ್ಯಾರಥಾನ್‌ಗೆ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ಚಾಲನೆ ನೀಡುವರು. ಮ್ಯಾರಥಾನ್ ಬೆಂಬಲಿಗರಾಗಿ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕೋಮ್ ಭಾಗವಹಿಸುವರು. [ಮ್ಯಾರಥಾನ್ ಗೂ ಮುನ್ನ cxo ರನ್]

run

ವಿವಿಧ ರೀತಿಯ ಮ್ಯಾರಥಾನ್: ಈ ಬಾರಿ ಮ್ಯಾರಥಾನ್‌ನಲ್ಲಿ ವಿವಿಧ ರೀತಿಯ ಓಟಗಳನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸಲು ಆಸಕ್ತರು ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.midnightmarathon.in/registration

  • ಸಂಜೆ 6 ಗಂಟೆಗೆ ಐಟಿ ಸಿಟಿ ಫನ್ ರನ್ 5 ಕಿ.ಮೀ. ಮ್ಯಾರಥಾನ್
  • ರಾತ್ರಿ 7.30 ಗಂಟೆಗೆ ಮಹಿಳೆಯರಿಗಾಗಿ 10 ಕಿ.ಮೀ. ಓಟ
  • ಎಲ್ಲರಿಗಾಗಿ ರಾತ್ರಿ 10 ಗಂಟೆಗೆ 10 ಕಿ.ಮೀ. ಮ್ಯಾರಥಾನ್
  • ಮಧ್ಯರಾತ್ರಿ ಅರ್ಧ ಮತ್ತು ಸಂಪೂರ್ಣ ಮ್ಯಾರಥಾನ್ [ಬೆಂಗಳೂರು ಮ್ಯಾರಥಾನ್ : ಕೀನ್ಯಾ ಪ್ರಾಬಲ್ಯ]

ರಾತ್ರಿಯಿಡೀ ಸಂಗೀತ, ಬಯಲು ಮಾರುಕಟ್ಟೆ ಮತ್ತು ಫುಡ್ ಕೋರ್ಟ್ ಉಚಿತ ವ್ಯವಸ್ಥೆ ಮಾಡಲಾಗಿದೆ. ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಸಂಗ್ರಹವಾದ ನಿಧಿಯನ್ನು ರೋಟರಿ ಕ್ಲಬ್‌ನ ಚಟುವಟಿಕೆಗೆ ಉಪಯೋಗಿಸಲಾಗುವುದು ಎಂದು ತಿಳಿಸಿದೆ.

English summary
Rotary Bangalore IT Corridor has organized a midnight marathon on December 20. There are 15 thousands people are expected to participate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X