ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವರಂಗ್‌- ಮಲ್ಲೇಶ್ವರ 3ದಿನ ವಾಹನ ಸಂಚಾರ ಬಂದ್‌

By Ashwath
|
Google Oneindia Kannada News

Manhole collapses roadblock
ಬೆಂಗಳೂರು, ಮೇ.4: ನಗರದಲ್ಲಿ ಹೆಚ್ಚು ವಾಹನ ದಟ್ಟಣೆ ಇರುವ ಮಹಾಕವಿ ಕುವೆಂಪು ರಸ್ತೆಯಲ್ಲಿ ಇನ್ನು ಮೂರುದಿನಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ನವರಂಗ್‌ ಸರ್ಕ‌ಲ್‌ನಿಂದ ಮಲ್ಲೇಶ್ವರಂ ಸರ್ಕ‌ಲ್‌‌ಗೆ ಸಂಪರ್ಕಿಸುವ ಮಹಾಕವಿ ಕುವೆಂಪು ರಸ್ತೆಯ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಬಳಿ ಜಲ ಮಂಡಳಿಯ 17 ಅಡಿ ಆಳದಲ್ಲಿರುವ ಮ್ಯಾನ್‌ಹೋಲ್‌ ಕುಸಿದಿದ್ದು, ನವರಂಗ್‌ ಸರ್ಕ‌ಲ್‌ನಿಂದ ದೇವಯ್ಯ ಪಾರ್ಕ್‌‌‌‌‌ವರೆಗೆ ವಾಹನ ಸಂಚಾರವನ್ನು ಪೊಲೀಸರು ನಿಷೇಧಿಸಿದ್ದಾರೆ.

ಜಲ ಮಂಡಳಿ ದೇವಯ್ಯ ಪಾರ್ಕ್‌ ಬಳಿ ಮ್ಯಾನ್‌ ಹೋಲ್‌‌ ಮತ್ತು ಒಳ ಚರಂಡಿ ದುರಸ್ತಿ ಕಾರ್ಯ‌ ಕೈಗೊಂಡಿದ್ದ ವೇಳೆ ಕಾರ್ಮಿ‌ಕರ ಆಚಾತುರ್ಯ‌ದಿಂದಾಗಿ ಮ್ಯಾನ್‌ ಹೋಲ್‌ ಕುಸಿದು ಬಿದ್ದಿದೆ.

ಮೆಟ್ರೋ ಪಿಲ್ಲರ್‌ಗೆ ಅಪಾಯ:
ಕಾಮಗಾರಿಗೆ ನೆಲ ಅಗೆದರೆ ಹತ್ತಿರವೇ ಇರುವ ಮೆಟ್ರೋ ಪಿಲ್ಲರ್‌‌ ಮತ್ತು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಈ ಭೀತಿಯ ನಡುವೆ ಜಲ ಮಂಡಳಿ ದುರಸ್ತಿ ಕಾರ್ಯ‌ವನ್ನು ನಡೆಸಬೇಕಿದೆ.

ಮೂರು ದಿನದಲ್ಲಿ ದುರಸ್ತಿ: ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ , ನವರಂಗ್‌ ಮೂಲಕ ಮಲ್ಲೇಶ್ವರಗೆ ಬರಬೇಕಿದ್ದ ಬಿಎಂಟಿಸಿ ಬಸ್‌‌ಗಳು ಸುಬ್ರಹ್ಮಣ್ಯ ನಗರದಲ್ಲಿ ಸಾಗಿ ಮಾರ್ಗೋಸಾ ರಸ್ತೆ ಮೂಲಕ ಮಲ್ಲೇಶ್ವರ ಸಂಪರ್ಕಿಸಬೇಕಿದೆ. ಇನ್ನು ಮೂರು ದಿನಗಳಲ್ಲಿ ಕಾಮಗಾರಿ ಕಾರ್ಯ ಪೂರ್ಣ‌ಗೊಳ್ಳಲಿದೆ ಎಂದು ಜಲ ಮಂಡಳಿ ಹೇಳಿದೆ.

English summary
After manhole collapses, roadblock for vehicles in Navrang to Malleswaram Road. Vehicular movement will be stopped temporarily from May 3 to 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X