ಬೆಂಗಳೂರು ಕಳವಳ - ಪರಾರಿಯಾದ ಚಿರತೆಗೆ ವ್ಯಾಪಕ ಶೋಧ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 15 : ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಚಿರತೆ ತಪ್ಪಿಸಿಕೊಂಡಿದ್ದು, ಬೆಂಗಳೂರಿನ ನಗರದಲ್ಲಿ ಆತಂಕ ಸೃಷ್ಠಿಯಾಗಿದೆ. ವಿಬ್ ಗಯಾರ್ ಶಾಲೆಯಲ್ಲಿ ಸೆರೆ ಹಿಡಿದ ಚಿರತೆ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದೆ. ಬೋನಿನಲ್ಲಿದ್ದ ಚಿರತೆ ಪರಾರಿಯಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಉದ್ಯಾನದ ಸುತ್ತ-ಮುತ್ತ ಶೋಧ : ಬನ್ನೇರುಘಟ್ಟ ಉದ್ಯಾನದಿಂದ ತಪ್ಪಿಸಿಕೊಂಡ ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬನ್ನೇರುಘಟ್ಟ, ಬೇಗಿಹಳ್ಳಿಕೊಪ್ಪ, ಭೈರನಹಳ್ಳಿ ಗ್ರಾಮದ ಸುತ್ತ-ಮುತ್ತ ಹುಡುಕಾಟ ನಡೆಸುತ್ತಿದ್ದಾರೆ.

ಬನ್ನೇರುಘಟ್ಟದಿಂದ ಚಿರತೆ ಪರಾರಿ : ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಚಿರತೆ ತಪ್ಪಿಸಿಕೊಂಡಿದೆ. ವಿಬ್ ಗಯಾರ್ ಶಾಲೆಯಲ್ಲಿ ಸೆರೆ ಹಿಡಿದ ಚಿರತೆ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದೆ. ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಉದ್ಯಾನವನದ ಸುತ್ತ-ಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಭಾನುವಾರ ರಾತ್ರಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿದ್ದ ಚಿರತೆಗೆ ಆಹಾರ ನೀಡಲಾಗಿತ್ತು. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಪರಿಶೀಲನೆ ನಡೆಸಿದಾಗ ಚಿರತೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬೋನ್‌ನಲ್ಲಿದ್ದ ಚಿರತೆ ನಾಪತ್ತೆಯಾಗಿದ್ದು ಹೇಗೆ? ಎಂಬುದು ಆಶ್ಚರ್ಯ ಮೂಡಿಸಿದೆ. [ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ]

leopard

ಫೆ.7ರಂದು ಚಿರತೆಯನ್ನು ಸೆರೆ ಹಿಡಿಯುವ ವೇಳೆ ಅದರ ಬಲಗಣ್ಣಿಗೆ ಗಾಯವಾಗಿತ್ತು ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಚಿರತೆಗೆ ಆಹಾರ ನೀಡಲಾಗಿತ್ತು. ನಂತರ ಅದು ತಪ್ಪಿಕೊಂಡಿದೆ. ಚಿರತೆ ತಪ್ಪಿಸಿಕೊಂಡ ಸುದ್ದಿ ಕೇಳಿ ಬನ್ನೇರುಘಟ್ಟ ಉದ್ಯಾನವನದ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ. [ಶಾಲೆಗೆ ನುಗ್ಗಿದ್ದ ಚಿರತೆ ಸೆರೆ ಸಿಕ್ಕಿದ್ದು ಹೇಗೆ?]

ವರ್ತೂರು ಬಳಿಯ ವಿಬ್ ಗಯಾರ್ ಶಾಲೆಗೆ ಫೆ.7ರ ಭಾನುವಾರ ಮುಂಜಾನೆ 4.15ರ ಸುಮಾರಿಗೆ ಈ ಚಿರತೆ ನುಗ್ಗಿತ್ತು. ರಾತ್ರಿ 7.30ರ ಸುಮಾರಿಗೆ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಈ ವೇಳೆ ಚಿರತೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿದಂತೆ ಮೂವರ ಮೇಲೆ ದಾಳಿ ಮಾಡಿತ್ತು. [ನಿಜಕ್ಕೂ ವರ್ತೂರಿಗೆ ಚಿರತೆ ಕರೆಸಿಕೊಂಡವರು ಯಾರು?]

ಶಾಲೆಯಲ್ಲಿ ಸೆರೆ ಹಿಡಿದ ಚಿರತೆಯನ್ನು ಬನ್ನೇರುಘಟ್ಟ ಉದ್ಯಾನಕ್ಕೆ ಸಾಗಿಸಲಾಗಿತ್ತು. 'ಕೆಲವು ದಿನಗಳ ಕಾಲ ಅದರ ಮೇಲೆ ನಿಗಾ ವಹಿಸಿ, ವರ್ತನೆಯನ್ನು ಅವಲೋಕಿಸಿ ನಂತರ ಕಾಡಿಗೆ ಬಿಡುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಅರಣ್ಯಾಧಿಕಾರಿ ನರೇಂದ್ರ ಬಾಬು ಅವರು ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Leopard captured in Vibgyor school on 7th February has escaped from the cage at Bannerghatta National Park in Bengaluru on 15th February morning. Forest officials are on combing mission to capture the wild cat. It is said that the Leopard escaped due to negligence of forest personnel.
Please Wait while comments are loading...