ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 01: ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರವೂ ದಾಳಿ ಮುಂದುವರೆಸಿದ್ದಾರೆ.ಏಕಕಾಲಕ್ಕೆ ನಗರದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 4.7 ಕೋಟಿ ರು. ಹೊಸ ನೋಟು ಪತ್ತೆಯಾಗಿದೆ. ಜತೆಗೆ ಐಷಾರಾಮಿ ಕಾರು ಲ್ಯಾಂಬೊರ್ಗಿನಿ ಕೂಡಾ ಜಪ್ತಿ ಮಾಡಲಾಗಿದೆ.

3 ವಾಹನಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳು ಬೆಂಗಳೂರಿನ ವಿವಿಧೆಡೆ ದಾಳಿ ಮುಂದುವರೆಸಿದ್ದಾರೆ. ದಾಳಿಗೆ ಒಳಪಟ್ಟವರಿಬ್ಬರು ಹಿರಿಯ ಅಧಿಕಾರಿಗಳು ಎಂದು ತಿಳಿದು ಬಂದಿದೆ.

IT raids in Bengaluru- Rs 4 crore in new currency, Lamborghini found in two locations

ಇಬ್ಬರ ಬಳಿ ಎಷ್ಟು ಪ್ರಮಾಣದಲ್ಲಿ ಹೊಸ ನೋಟು ಲಭ್ಯವಾಗಲಿದೆ ಎಂಬುದರ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇಬ್ಬರ ಬಳಿ 4.7 ಕೋಟಿ ರುಗೂ ಅಧಿಕ ಮೊತ್ತದ ನಗದು ಹೊಸ ನೋಟು, ಏಳು ಕೆಜಿ ಆಭರಣ, ಲ್ಯಾಂಬೊರ್ಗಿನಿ ಕಾರು ಪತ್ತೆಯಾಗಿರುವುದು ಹಾಗೂ ಜಪ್ತಿ ಮಾಡಿರುವುದನ್ನು ಐಟಿ ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಬಂಧಿತರಿಂದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನೂ ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A raid on two individuals at Bengaluru has led to a major seizure of up to Rs 4 crore in cash which were largely new notes. The raids are said to have taken place at the homes of two senior bureaucrats.
Please Wait while comments are loading...