ರವಿ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಮಾ.23: ಜನರ ಭಾವನೆಗಳಿಗೆ ಸ್ಪಂದಿಸಿ, ಪ್ರಾಮಾಣಿಕ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸದನದಲ್ಲಿ ಘೋಷಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನರ ಭಾವನೆಗಳಿಗೆ ಸರ್ಕಾರ ಸದಾಕಾಲ ಬೆಲೆ ನೀಡುತ್ತಾ ಬಂದಿದೆ. ರವಿ ಅವರ ಪೋಷಕರು ಇಲ್ಲಿ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಬಳಿ ಧರಣಿ ನಡೆಸಿದ್ದಾಗಲೂ ನಾನು ಇದೇ ಮಾತು ಹೇಳಿದ್ದೆ. [ಸಿಬಿಐ ತನಿಖೆ : ವಿಳಂಬ ಏಕೆ? ಟ್ವಿಟ್ಟರ್ ನಲ್ಲಿ ಪ್ರಶ್ನೆಗಳ ಬಾಣ]

ವಿಪಕ್ಷಗಳು ವಿನಾಕಾರಣ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ. ಸಿಬಿಐ ಎಂದರೆ ಕಾಂಗ್ರೆಸ್ ಬಚಾವೋ ಏಜೆನ್ಸಿ ಎನ್ನುತ್ತಿದ್ದ ಬಿಜೆಪಿಯವರು ಈಗ ನಮ್ಮ ವಿರುದ್ಧ ದನಿ ಎತ್ತಿದ್ದಾರೆ. ನಾನು ಸಿಬಿಐ ಹಾಗೂ ಸಿಐಡಿ ಎರಡಕ್ಕೂ ಸಮಾನ ಗೌರವ ನೀಡುತ್ತಾ ಬಂದಿದ್ದೇನೆ.[ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ಸಿಐಡಿ ಮಧ್ಯಂತರ ವರದಿ ಪಡೆದು ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರೆ, ವರದಿ ಮಂಡಿಸದಂತೆ ಹೈಕೋರ್ಟ್ ತಡೆ ನೀಡಿದೆ. ನಮ್ಮ ಸರ್ಕಾರಕ್ಕೆ ಸಿಐಡಿ ಹಾಗೂ ಸಿಬಿಐ ಎರಡ ಮೇಲೂ ನಂಬಿಕೆ ಇದೆ.ಯಾರನ್ನು ನಾವು ರಕ್ಷಿಸುತ್ತಿಲ್ಲ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದರು. [ರವಿ ಸಾವು : ಸೋಮವಾರದ ಬೆಳವಣಿಗೆಗಳು]

IAS officer’s death, Karnataka govt hands over case to CBI

ಸೋಮವಾರ ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಸಭೆ ನಡೆಸಲಾಯಿತು. ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಡಿಕೆ ರವಿ ಕುಟುಂಬದವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸೋಮವಾರದ ಗಡುವು ನೀಡಿದ್ದವು. ಡಿಕೆ ರವಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರೂ ಸದನದಲ್ಲಿ ವಿಪಕ್ಷಗಳು ಇನ್ನೂ ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ.[ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸವೇನು?]

DK Ravi

ಸಿಬಿಐ ತನಿಖೆಗೆ ನೀಡುವ ಪ್ರಕ್ರಿಯೆ: ರಾಜ್ಯದ ಪ್ರಕರಣವೊಂದನ್ನು ಸಿಬಿಐಗೆ ವಹಿಸುವ ಪ್ರಕ್ರಿಯೆಯಲ್ಲಿ ಮೊದಲಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಮನವಿ ಸಲ್ಲಿಸಬೇಕಾಗುತ್ತದೆ. ನಂತರ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಸಿಬಿಐಗೆ ಸೂಚನೆ ನೀಡುತ್ತದೆ. [ಕೊನೆಗೂ ಈಡೇರದ ರವಿ ದೊಡ್ಡ ಕನಸು]

ಡಿಕೆ ರವಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಶುಕ್ರವಾರವೇ ತೀರ್ಮಾನಿಸಲಾಗಿತ್ತು. ಅದರೆ, ಸದನದ ಕಲಾಪವನ್ನು ಸೋಮವಾರದ ತನಕ ಮುಂದೂಡಲಾಗಿತ್ತು. [ಡಿಕೆ ರವಿ ಉಸಿರುಗಟ್ಟಿ ಸಾವು]

ಹೀಗಾಗಿ ಸೋಮವಾರ ಅಧಿಕೃತವಾಗಿ ಸದನದಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಈಗ ಸ್ಪೀಕರ್ ಅವರು ಸರ್ಕಾರದ ಘೋಷಣೆಗೆ ಅಂಕಿತ ಹಾಕಿದ ಮೇಲೆ ಈ ಮನವಿ ಪತ್ರ ಗೃಹ ಸಚಿವಾಲಯದ ಕೈ ಸೇರಲಿದೆ. [ತಾಯಿ ಗೌರಮ್ಮನವರ ಸಂದರ್ಶನ ]


ಗೃಹ ಸಚಿವಾಲಯದ ನಿರ್ದೇಶನದ ನಂತರ ಸಿಬಿಐ ವಿಶೇಷ ತಂಡವನ್ನು ರಚಿಸಿ ತನಿಖೆಗೆ ಮುಂದಾಗುತ್ತದೆ. ಪೊಲೀಸರು, ಸಿಐಡಿ ತಂಡ ಕಲೆ ಹಾಕಿರುವ ಮಾಹಿತಿ, ವೈದ್ಯಕೀಯ ವರದಿಯಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನು ಮತ್ತೊಮ್ಮೆ ಸಿಬಿಐ ವಿಚಾರಣೆಗೊಳಪಡಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+