ಡಿಕೆ ರವಿ ತಾಯಿ ಗೌರಮ್ಮನವರ ಸಂದರ್ಶನ
ಬೆಂಗಳೂರು, ಮಾ. 19: ನನ್ನ ಮಗ ಹೇಡಿಯಲ್ಲ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕೆಟ್ಟ ಸ್ಥಿತಿಗೆ ತಲುಪಿರಲಿಲ್ಲ. ಅವನ ಮನಸ್ಸು ಅಂಥದ್ದಲ್ಲ ಎಂದು ಆ ಮಹಾತಾಯಿ ತನ್ನ ಮಗನ ಬಗ್ಗೆ ಹೇಳುವಾಗ ಆಕೆಯ ಕಣ್ಣಲ್ಲಿ ವ್ಯವಸ್ಥೆ ಮೇಲಿನ ಅಸಹ್ಯ ಸ್ಪಷ್ಟವಾಗಿ ಕಾಣುತ್ತಿತ್ತು.
ಜನಪರ ಕೆಲಸ ಮಾಡಿದರೆ ಸಿಗುವ ಬಹುಮಾನ ಇದೇನಾ? ಆತ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವನ ಮನಸ್ಥಿತಿಯೂ ಅಂಥದ್ದಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ ಡಿಕೆ ರವಿ ತಾಯಿ ಗೌರಮ್ಮ. [ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಯಾವಾಗಲೂ ಸಮಾಜದಲ್ಲಿನ ಕೊಳೆ ತೊಳೆಯುವ ಬಗ್ಗೆ ಮಾತನಾಡುತ್ತಿದ್ದ. ಜನರ ಏಳಿಗೆಗೆ ಬದುಕಿದ ರವಿ ಸದಾ ಜನರೊಂದಿಗೆ ಬೆರೆತಿರುತ್ತಿದ್ದ. ಇದೇ ಆತನ ಸಾವಿಗೆ ಕಾರಣವಾಯಿತೇ? ಎನ್ನುವಾಗ ಗೌರಮ್ಮ ಕಣ್ಣಲ್ಲಿ ನೀರು ಜಿನುಗುತ್ತಿತ್ತು.
ಸಮಾಜಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಸರಿಮಾಡುವ ಕೆಲಸಕ್ಕೆ ಕೈ ಹಾಕಿದ್ದ ರವಿ ಅದರಂದ ಎಂದಿಗೂ ಹಿಂದೆ ಸರಿಯಲು ಸಿದ್ಧನಿರಲಿಲ್ಲ. ಅಂಥ ವ್ಯಕ್ಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂಬುದನ್ನು ಹೇಗೆ ತಾನೆ ಒಪ್ಪಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಾರೆ.[ಈ ಸಾವು ನ್ಯಾಯವೇ? ಮತ ಹಾಕಿ]
ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಏಕೆ ಹಿಂಜರಿಯುತ್ತಿದೆ?
ನಾವೇನು ಹೆಚ್ಚಿಗೆ ಕೇಳುತ್ತಿದ್ದೇವಾ? ತನಿಖೆಯನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರ ಯಾಕೆ ಹಿಂಜರಿಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸಾವಿನ ಹಿಂದಿನ ಸತ್ಯ ಬಯಲಿಗೆ ಬರಲೇ ಬೇಕು. ಸಿಬಿಐ ತನಿಖೆಯಿಂದಲೇ ಮಾತ್ರ ಮಗನ ಸಾವಿನ ಸತ್ಯಾಸತ್ಯತೆ ಬಯಲಿಗೆಳೆಯಲು ಸಾಧ್ಯ ಎಂದು ಗೌರಮ್ಮ ಬಲವಾಗಿ ನಂಬಿದ್ದಾರೆ.
ನನ್ನ ಮಗ ದೇಶಕ್ಕೆ ಹೆಮ್ಮೆ ತರುವಂತೆ ನಡೆದುಕೊಳ್ಳುತ್ತಿದ್ದ. ಆತನ ಮೇಲಿನ ಅಭಿಮಾನ ಎಂದಿಗೂ ಕಡಿಮೆಯಾಗುವುದಿಲ್ಲ. ಆತನ ಕೆಲಸಗಳೇ ಅವನ್ನನ್ನು ರೋಲ್ ಮಾಡೆಲ್ ಮಾಡಿ ನಿಲ್ಲಿಸುವೆ. ರವಿಗೆ ಬೆದರಿಕೆ ಇತ್ತು ಎಂಬ ಸಂಗತಿ ಪ್ರತಿಯೊಬ್ಬರಿಗೂ ಗೊತ್ತು. ಆತನ ಸಾವಿನ ಹಿಂದಿನ ರಹಸ್ಯ ಖಂಡಿತ ಬಯಲಾಗಬೇಕು ಎಂದು ಗೌರಮ್ಮ ಒತ್ತಾಯ ಮಾಡುತ್ತಾರೆ.
ಮಗನ ಕಳೆದುಕೊಂಡ ತಾಯಿಯದು ಒಂದೇ ಆಗ್ರಹ. ಸಾವಿನ ಹಿಂದಿರುವ ವ್ಯಕ್ತಿಗಳು ಯಾರು? ಎಂಬುದು ಬಹಿರಂಗವಾಗಬೇಕು. ಹಾಗಾಗಬೇಕಾದರೆ ಸಿಬಿಐ ತನಿಖೆಯೇ ಪರಿಹಾರ. ಇದಕ್ಕೆ ಸರ್ಕಾರ ಕೂಡಲೇ ಧ್ವನಿಗೂಡಿಸಬೇಕು ಎಂದು ಗೌರಮ್ಮ ಹೇಳುವಾಗ ಗದ್ಗದಿತರಾಗುತ್ತಾರೆ.[ರವಿ ಸಾವು: ಘಟನಾವಳಿಗಳ ಸಂಪೂರ್ಣ ಚಿತ್ರಣ]
ರವಿ ಸಹ ಕಳೆದ ಶುಕ್ರವಾರ ನಡೆದ ಕಿರಿಯ ಅಧಿಕಾರಿಗಾಳ ಸಭೆಯಲ್ಲಿ ಇದೇ ಮಾತನ್ನಾಡಿದ್ದರು. ಸುಮ್ಮನೆ ಬದುಕು ಸವೆಸಿ ಮಣ್ಣಾದರೆ ಪ್ರಯೋಜನವಿಲ್ಲ. ಸಿಕ್ಕ ಅಧಿಕಾರವನ್ನು ಜನರ ಏಳಿಗೆಗೆ ಬಳಸಿಕೊಳ್ಳಬೇಕು ಎಂದಿದ್ದರು. ಈ ಮಾತು ಹೇಳಿ ಎರಡು ದಿನದಲ್ಲಿಯೇ ಡಿಕೆ ರವಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಮಾತ್ರ ದುರ್ದೈವ.












Click it and Unblock the Notifications