ಪ್ರಾಣ ಹೋದರೂ ಬಿಜೆಪಿ ಬಿಡುವ ಮಾತಿಲ್ಲ: ಈಶ್ವರಪ್ಪ

Posted By:
Subscribe to Oneindia Kannada

ಬೆಂಗಳೂರು, ಜನವರಿ 11: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಬಿಜೆಪಿ ತೊರೆಯುತ್ತಾರೆ ಎಂಬ ಸುದ್ದಿಗೆ ಬುಧವಾರ ರೆಕ್ಕೆಪುಕ್ಕ ಬೆಳೆದು ಹಾರಾಡಿತು. ಈ ಬಗ್ಗೆ ಸ್ವತಃ ಈಶ್ವರಪ್ಪನವರ ಅಭಿಪ್ರಾಯ ಪಡೆಯಲು ಒನ್ಇಂಡಿಯಾ ಕನ್ನಡ ಅವರನ್ನು ಸಂಪರ್ಕಿಸಿತು.

ಆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಾಣ ಹೋದರೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಹಾಗಾದರೆ ರಾಯಣ್ಣ ಬ್ರಿಗೇಡ್ ಈ ಹಿಂದೆ ಇರಿಸಿಕೊಂಡಿದ್ದ ಉದ್ದೇಶದಿಂದ ವಾಪಸ್ ಬಂದಿದೆ ಎಂದು ನೀವು ಹೇಳಿದ್ದರ ವಿವರಣೆ ನೀಡುತ್ತೀರಾ ಎಂಬ ಪ್ರಶ್ನೆಗೆ, ಬ್ರಿಗೇಡ್ ನ ಬೆಂಬಲ ಬೇಡ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ.[ಯಡಿಯೂರಪ್ಪ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಈಶ್ವರಪ್ಪ]

I will not quit BJP till my last breath: Eshwarappa

ರಾಯಣ್ಣ ಬ್ರಿಗೇಡ್ ಸ್ವತಂತ್ರ ಸಂಘಟನೆ. ಅದರ ಉದ್ದೇಶ ದಲಿತರು ಹಾಗೂ ಹಿಂದುಳಿದ ವರ್ಗದವರ ಉದ್ಧಾರ. ಬ್ರಿಗೇಡ್ ಗೆ ವಿವಿಧ ಜಾತಿಗಳ ಸ್ವಾಮೀಜಿ ಮಾರ್ಗದರ್ಶನ ಇದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಹ ಇದ್ದಾರೆ. ಆದ್ದರಿಂದ ದಲಿತರು ಹಾಗೂ ಹಿಂದುಳಿದ ವರ್ಗದವರ ಏಳ್ಗೆಗಾಗಿ ಶ್ರಮಿಸಲು ಆ ಸಂಘಟನೆ ಇದೆ. ಅದನ್ನು ಒಬ್ಬರು ಮುಖ್ಯಮಂತ್ರಿಯಾಗಿ ಮಾಡಲು ಬಳಸುವುದು ಸರಿಯಲ್ಲ ಎಂದು ಈಗ ಅನಿಸಿದೆ ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I will not quit BJP till my last breath, said by BJP leader KS Eshwarappa. He is answering to Oneindia Kannada about BJP quit rumour.
Please Wait while comments are loading...