Realme Narzo 70: ಭರ್ಜರಿ ಕ್ಯಾಮೆರಾ ಫೀಚರ್‌ಗಳೊಂದಿಗೆ ರಿಯಲ್‌ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡಲು ಕಂಪನಿಗಳು ಒಂದಿಲ್ಲೊಂದು ಪ್ರಯತ್ನವನ್ನು ಮಾಡುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ರಿಯಲ್‌ಮಿ ಸಹ ಹಿಂದೆ ಬಿದ್ದಿಲ್ಲ. ಚೀನಾ ಮೂಲದ ಮೊಬೈಲ್ ಕಂಪನಿಯೂ ಸಹ ಕಾಲ ಕಾಲಕ್ಕೆ ಬದಲಾಗುತ್ತಲೇ ಇದೆ. ಈಗ ಏಪ್ರಿಲ್ 24ಕ್ಕೆ ಮತ್ತೊಂದು ಮೊಬೈಲ್ ಸದ್ದಿಲ್ಲದೆ ಮಾರ್ಕೆಟ್‌ಗೆ ಎಂಟ್ರಿ ನೀಡಿದೆ.
ರಿಯಲ್‌ಮಿ ಯಾವಾಗಲೂ ತನ್ನ ಮೊಬೈಲ್ ಡಿಸೈನ್ ಬಗ್ಗೆ ಹೆಚ್ಚು ಚರ್ಚೆ ಎಲ್ಲಿರುತ್ತಿದೆ. Realme Narzo 70 ಸಹ ಈ ಸಾಲಿಗೆ ಸೇರುವ ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್ ಯುನಿಕ್ ಡಿಸೈನ್‌ನಿಂದ ಗ್ರಾಹರಕನ್ನು ಸೆಳೆಯಲಿದೆ. ಅಲ್ಲದೆ ಕಂಪನಿ ತನ್ನ ಫೋನ್‌ಗಳಲ್ಲಿ ಹೊಸತನವನ್ನು ತಂದಿರುತ್ತದೆ. ಮೊಬೈಲ್ ಹಿಂಬಾಗದ ಅರ್ಧಭಾಗ ಗ್ಲಾಸ್ ಬ್ಯಾಕ್ ಆಗಿದ್ದು, ಇನ್ನು ಅರ್ಧ ಭಾಗ ಶೈನಿ ಫಿನಿಷ್ ಹೊಂದಿದೆ. ಈ ಫೋನ್ 198 ಗ್ರಾಮ್ ತೂಕವನ್ನು ಹೊಂದಿದ್ದು, ಗ್ಲಾಸ್ ಗ್ರೀನ್ ಹಾಗೂ ಗ್ಲಾಸ್ ಗೋಲ್ಡ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಇದೆ.

ಈ ಬಜೆಟ್‌ನಲ್ಲಿ ಬರುವ ಹಲವು ಕಂಪನಿಯ ಮೊಬೈಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆದರೆ ರಿಯಲ್‌ಮಿ ನಾರ್ಜೊ ಈ ಮೊಬೈಲ್‌ಗಳಿಗೆ ಪೈಪೋಟಿ ನೀಡಲು ಭರ್ಜರಿಯಾಗಿ ಎಂಟ್ರಿ ನೀಡಿದೆ. ಇನ್ನು ಈ ಮೊಬೈಲ್ ತನ್ನ ಕ್ಯಾಮೆರಾದಿಂದಲೇ ಹೆಚ್ಚು ಚರ್ಚಿತವಾಗಿದೆ.
ಡಿಸ್‌ಪ್ಲೇ ಹೇಗಿದೆ?
Realme ನ ಈ ಫೋನ್ 6.67 ಇಂಚಿನ ಫುಲ್‌ಎಚ್‌ಡಿ ಅಮ್ಲೋಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್‌ನ ಡಿಸ್‌ಪ್ಲೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು 1,200 ನಿಟ್ಸ್ ವರೆಗಿನ ಗರಿಷ್ಠ ಹೊಳಪನ್ನು ಹೊಂದಿರುತ್ತದೆ. ಈ ಸ್ಮಾರ್ಟ್ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಈ ಮೊಬೈಲ್ ಮಿಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಹೊಂದಿದೆ. ಅಲ್ಲದೆ 45W ವೇಗದ ಚಾರ್ಜಿಂಗ್ ಬೆಂಬಲ ಇರುವ 5,000mAh ಶಕ್ತಿಯುತ ಬ್ಯಾಟರಿಯನ್ನು ಹೊಂದಿದೆ.

ಈ ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮೊದಲನೆಯದು 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿದೆ. ಇನ್ನೊಂದು ಫೋನ್ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಹೊಂದಿರಲಿದೆ. ಈ ಫೋನ್ 15999 ಹಾಗೂ 16999 ರೂಪಾಯಿಗಳಿಗೆ ಲಭ್ಯವಾಗಲಿದೆ.
ಕ್ಯಾಮೆರಾ ಹೇಗಿದೆ?
ಹಿಂಬಾಗದಲ್ಲಿ ವೃತ್ತಾಕಾರದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಸೆಟಪ್ ಮಾಡಲಾಗಿದೆ. ಪ್ರೈಮರಿ ಕ್ಯಾಮೆರಾ ಸೋನಿಯ ಐಎಂಎಕ್ಸ್ 890 ಇದ್ದು ಇದು 50 ಮೆಗಾ ಪಿಕ್ಸಲ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಡ್ ಸೆನ್ಸರ್ ಇದೆ. ಮೂರನೇಯದ್ದು 2 ಮೆಗಾ ಪಿಕ್ಸಲ್ ಮೈಕ್ರೋ ಸೆನ್ಸರ್‌ಗಳನ್ನು ಹೊಂದಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗೆ 16 ಮೆಗಾ ಪಿಕ್ಸಲ್ ಕ್ಯಾಮೆರಾ ಇದೆ.
ಬಾಕ್ಸ್‌ನಲ್ಲಿ ಏನಿದೆ?
ಡಾಕ್ಯುಮೆಂಟೆಷನ್
ಮೊಬೈಲ್ ಕವರ್
ಸಿಮ್ ಕಾರ್ಡ್ ಟೂಲ್
67 ವ್ಯಾಟ್ ಚಾರ್ಜರ್
ಟೈಪ್ ಎ ಟು ಟೈಪ್ ಸಿ ಚಾರ್ಜಿಂಗ್ ಕೇಬಲ್
ಮೊಬೈಲ್ ಕೆಳಭಾಗದರುವ ಫೀಚರ್ಸ್
ಸ್ಪೀಕರ್ ಗ್ರಿಲ್
ಯುಎಸ್‌ಬಿ ಟೈಪ್ ಸಿ
ಮೈಕ್ರೋಫೋನ್
ಸಿಮ್ ಕಾರ್ಡ್ ಟ್ರೇ
ಈ ವ್ಯವಸ್ಥೆ ಮೊಬೈಲ್ ಮೇಲಭಾಗದಲ್ಲಿದೆ?
3.5 ಎಂಎಂ ಜ್ಯಾಕ್
ಸ್ಪೀಕರ್ ಗ್ರಿಲ್
ನಾಯ್ಸ್ ಕ್ಯಾನಲಿಂಗ್ ಮೈಕ್ರೋ ಫೋನ್
ಮೊಬೈಲ್ ರೈಟ್ ಸೈಡ್‌ನಲ್ಲಿ ಏನಿದೆ?
ವ್ಯಾಲ್ಯೂಮ್ ಬಟನ್‌ಗಳು
ಪವರ್ ಆನ್ ಆಫ್ ಬಟನ್












Click it and Unblock the Notifications