ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಎಷ್ಟು ವರ್ಷ ಬೇಕು?

ಬೆಂಗಳೂರು, ಡಿಸೆಂಬರ್, 14: ಬೆಳ್ಳಂದೂರು ಕೆರೆ ರಾಸಾಯನಿಕ ನೊರೆ ಸಮಸ್ಯೆ ಬಗ್ಗೆ ಮಾಧ್ಯಮಗಳೂ ಸಾಕಷ್ಟು ವರದಿ ಮಾಡಿವೆ. ಆದರೆ ಸದ್ಯಕ್ಕಂತೂ ಯಾವುದೇ ಪರಿಹಾರ ಸಿಕ್ಕಿಲ್ಲ.

ಕರ್ನಾಟಕ ಸರ್ಕಾರ ಅನೇಕ ಏಜೆನ್ಸಿಗಳ ಬಾಗಿಲು ಬಡಿದಿದೆ. ಬಿಬಿಎಂಪಿ ಸಹ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ಮಾಡಿದೆ. ಸ್ಥಳೀಯರು ಮತ್ತು ಕರೆ ಸುತ್ತಲಿನ ರಸ್ತೆಯಲ್ಲಿ ಸಂಚಾರ ಮಾಡುವವರು ಕಳೆದ 4 ವರ್ಷಗಳಿಂದ ಪ್ರತಿದಿನ ನೊರೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾದರೆ ಸದ್ಯದ ಸ್ಥಿತಿ ಏನು?[ಒಡಲಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕೆರೆಯ ಕಥೆ ವ್ಯಥೆ]

How long will it take to kill the froth at Bellandur lake?

ತಾತ್ಕಾಲಿಕ ಪರಿಹಾರ
ಬೆಂಗಳೂರು ಜಲಮಂಡಳಿ ಆಯುಕ್ತ ವಿಜಯ್ ಭಾಸ್ಕರ್, ನಾವು ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬೆಳ್ಳಂದೂರು ಮತ್ತು ವರ್ತೂರು ಕೆರೆಗೆ ಬಿಡುವ ನೀರನ್ನು ಶುದ್ಧೀಕರಣ ಮಾಡಿ ಬಿಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನ 800 ಮಿಲಿಯನ್ ಲೀಟರ್ ವಿಷಯುಕ್ತ ನೀರು ಕೆರೆಗೆ ಸೇರುತ್ತಿದ್ದು ಅದನ್ನು ತರೆಯಲಾಗಿದೆ. ಬಿಬಿಎಂಪಿ ಮತ್ತು ಬಿಡಿಎ ಸಹ ಕೆರೆ ರಕ್ಷಣೆಗೆ ಕಾರ್ಯಬದ್ಧವಾಗಿವೆ. ಬಿಡಿಎ ಕೆರೆ ಸುತ್ತ ತಡೆಗೋಡೆಯನ್ನು ನಿರ್ಮಾಣ ಮಾಡುತ್ತಿದೆ.[ಗೂಗಲ್ ಮ್ಯಾಪ್ ನಲ್ಲಿ 'ಬೆಳ್ಳಂದೂರು ಲೇಕ್' ಹುಡುಕಬೇಡಿ!]

ವಿದ್ಯಾರ್ಥಿಗಳ ಯೋಜನೆ
ಕೆರೆ ಸಂರಕ್ಷಣೆ ಪಣ ತೊಟ್ಟಿರುವ ವಿದ್ಯಾರ್ಥಿಗಳು ಜಾಗೃತಿ ಅಭಿಯಾನ ಆರಂಭ ಮಾಡಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಿನ ಅಂತಿಮ ಬಿಎಸ್ ಸಿ ವಿದ್ಯಾರ್ಥಿನಿಯರಾದ ಸಂಜನಾ ಚೆವಲನ್, ಅಸ್ಪ್ರಿತ್ ಕೌರ್, ನಾಮ್ಗೆ ಚೊಡನ್, ಮಾನಸಿ ಆನಂದ್, ಅನಾಮಿತ್ರಾ ಚಟರ್ಜಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಸೆಂಟ್ರಲ್ ಮಾಲ್ ನಿಂದ ಕೆರೆ ವರೆಗೆ ಪಾದಯಾತ್ರೆ ಮಾಡಿ ಜಾಗೃತಿ ಮೂಡಿಸಿದ್ದಾರೆ.

ವಿದ್ಯಾರ್ಥಿಗಳು ತಾವೇ ತಯಾರು ಮಾಡಿದ ಪ್ರಾತ್ಯಕ್ಷಿಕೆಯೊಂದನ್ನು ಮುಂದೆ ಇಟ್ಟಿದ್ದಾರೆ. ಬೆಂಗಳೂರು ಜಲಮಂಡಳಿಗೆ ಅಂತಿಮ ಕರಡನ್ನು ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+