ಡಿ.8 ರಿಂದ ಬೆಂಗಳೂರಿನಲ್ಲಿ ಮತ್ಸ್ಯಮೇಳ: ಕಂಠೀರವ ಕ್ರೀಡಾಂಗಣ ಸಜ್ಜು

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04 : ರಾಜ್ಯ ಮೀನುಗಾರಿಕೆ ಇಲಾಖೆಯು ಡಿಸೆಂಬರ್ 8 ರಿಂದ 11 ರವರೆಗೆ ಮೀನುಗಾರಿಕೆ ಮಹಾಮೇಳ 'ಮತ್ಸ್ಯ ಮೇಳ-2017'ವನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಇದು ದೇಶದ ಪ್ರಮುಖ ಮೀನುಗಾರಿಕಾ ಮೇಳವಾಗಿದ್ದು, ನೂರಕ್ಕೂ ಹೆಚ್ಚು ದೇಶೀಯ ಹಾಗೂ ವಿದೇಶಿ ಅಲಂಕಾರಿಕಾ ಮೀನು ತಳಿಗಳ ಪ್ರದರ್ಶನ ಗ್ಯಾಲರಿಯ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಉತ್ತಮ ಅಲಂಕಾರಿಕಾ ಮೀನು ತಳಿಗಳು, ಅಕ್ವಾಸ್ಕೇಪ್ ಹಾಗೂ ಅಕ್ವೇರಿಯಂ ವಿಭಾಗದಲ್ಲಿ ಹವ್ಯಾಸಿಗರಿಗಾಗಿ ಸ್ಪರ್ಧೆಗಳು ನಡೆಯಲಿದೆ.

Country's biggest Matsya Mela in Bengaluru

ಮೀನು ಕೃಷಿ ಕೊಳಗಳು, ಪಂಜರಗಳಲ್ಲಿ ಮೀನು ಕೃಷಿ ಪದ್ಧತಿಗಳು, ಅಕ್ಆಸ್ಕೇಪ್ ಮತ್ತು ದೊಡ್ಡ ಮೀನುಗಳ ಪ್ರತಿಕೃತಿಗಳಿರುವ ವಿಷಯಾಧಾರಿತ ಮಾಹಿತಿ ವಿಭಾಗ, ಮೀನಿನ ವೈವಿದ್ಯಮಯ ಖಾದ್ಯ ಪದಾರ್ಥಗಳ ತಯಾರಿಕಾ ವಿಭಾಗಗಳು, ತಿನ್ನಸಲು ಸಿದ್ಧವಿರುವ ಉತ್ಪನ್ನಗಳು ಹಾಗೂ ನುರಿತ ಬಾಣಸಿಗರಿಂದ ಪ್ರಾತ್ಯಕ್ಷಿಕೆಗಳು ನಡೆಯಲಿದೆ.

ಜತೆಗೆ ಮೀನು ಖಾದ್ಯ ಪದಾರ್ಥಗಳ ತಯಾರಿಕಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ.
ಏನು- ಮತ್ಸ್ಯ ಮೇಳ 2017
ಎಲ್ಲಿ- ಕಂಠೀರವ ಕ್ರೀಡಾಂಗಣ ಬೆಂಗಳೂರು
ಯಾವಾಗ- ಡಿಸೆಂಬರ್ 8 ರಿಂದ 11

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Matsya Mela, country's one of the biggest fisheries carnival is organising at Kantirava Stadium in Bengaluru from dec.8.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ