ಬೆಂಗಳೂರು : ಬಾಂಬ್ ವದಂತಿ ತನಿಖೆಗೆ ವಿಶೇಷ ತಂಡ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 18 : ಸಂಕ್ರಾಂತಿ ದಿನದಂದು ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಚೀಲದ ಬಗ್ಗೆ ತನಿಖೆ ನಡೆಸಲು ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಬ್ಯಾಗ್‌ನಲ್ಲಿ 30 ಎಂಎಲ್ ಮದ್ಯವಿದ್ದ ಬಾಟಲಿ ಪತ್ತೆಯಾಗಿತ್ತು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಕಾವೇರಿ ಜಂಕ್ಷನ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಚೀಲ ಪತ್ತೆಯಾದ ನಂತರ ಅದು ಬಾಂಬ್ ಇರಬಹುದು ಎಂದು ಶಂಕಿಸಲಾಗಿತ್ತು. ಜಂಕ್ಷನ್ ಸುತ್ತಮುತ್ತಲಿನ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಬಾಂಬ್ ನಿಷ್ಕ್ರೀಯ ದಳದವರು ಪರಿಶೀಲನೆ ನಡೆಸಿ ಚೀಲದಲ್ಲಿರುವುದು ಬಾಂಬ್ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. [ಬೆಂಗಳೂರನ್ನು ಬೆಚ್ಚಿಸಿದ ಬಾಂಬ್ ವದಂತಿ!]

bangalore police

ಬೆಂಗಳೂರು ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಕಾವೇರಿ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಚೀಲವನ್ನು ತಂದಿಟ್ಟ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಬ್ರೇಕಿಂಗ್ ನ್ಯೂಸೋ, ತಲೆ ಬ್ರೇಕ್ ಮಾಡುವಂಥ ಸುದ್ದಿಯೋ!]

ಬ್ಯಾಗ್‌ನಲ್ಲಿ ಸಿಕ್ಕ ವಸ್ತುಗಳನ್ನು ಪೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಲ್ಯಾಬ್‌ನಿಂದ ಬಂದ ಪ್ರಾಥಮಿಕ ವರದಿಗಳು ಬ್ಯಾಗ್‌ನಲ್ಲಿ ಕೇವಲ ಮದ್ಯವಿದೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿವೆ. ಆದರೆ, ಪೊಲೀಸರು ಬ್ಯಾಗ್ ಅನ್ನು ತಂದಿಟ್ಟವರು ಯಾರು? ಎಂದು ತನಿಖೆ ನಡೆಸುತ್ತಿದ್ದಾರೆ.

ಬಾಕ್ಸ್ ಪತ್ತೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು, 'ಬೆಂಗಳೂರಿಗರು ಆತಂಕ ಪಡುವ ಅವಶ್ಯಕತೆ ಇಲ್ಲ ಬಾಕ್ಸ್ ನಲ್ಲಿ ದ್ರವರೂಪದ ವಸ್ತುಗಳು ಪತ್ತೆಯಾಗಿದೆ. ಬಾಕ್ಸ್ ಮೇಲೆ ಚೀನೀ ಭಾಷೆಯಲ್ಲಿ ಮುದ್ರಿಸಿದ ಕೆಲವು ಕಾಗದಗಳಿವೆ. ಯಾವುದೇ ಸ್ಫೋಟಕಗಳು ಇಲ್ಲ' ಎಂದು ಸ್ಪಷ್ಟಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A special team has been constituted to probe the bomb scare incident that took place in Bengaluru on Friday. The police have ascertained beyond doubt that the bag found at Sankey Road contained no explosive. However the incident caused a scare and the police has decided to get to the bottom of it.
Please Wait while comments are loading...