ಜಲಮಂಡಳಿ ತಾರತಮ್ಯ: ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ

Posted By: Nayana
Subscribe to Oneindia Kannada
   ಜಲಮಂಡಳಿ ವಿರುದ್ಧ ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳ ಪ್ರತಿಭಟನೆ | Oneindia Kannada

   ಬೆಂಗಳೂರು, ಡಿಸೆಂಬರ್ 02: ನಗರದ ಅಪಾರ್ಟ್ ಮೆಂಟ್ ಗಳ ಮೇಲೆ ಜಲಮಂಡಳಿ ತೋರುತ್ತಿರುವ ತಾರತಮ್ಯವನ್ನು ಖಂಡಿಸಿ ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ಪ್ರತಿಭಟನೆಯನ್ನು ಶನಿವಾರ ಬೆಂಗಳೂರು ನಗರಾದ್ಯಂತ ಆರಂಭಿಸಿದೆ.

   ಕಸ ವಿಲೇವಾರಿ ಶುಲ್ಕ,ನೈರ್ಮಲ್ಯ ಶುಲ್ಕ ಸಂಗ್ರಹಿಸಲಾಗುತ್ತದೆ. ಆದರೆ ಯಾವುದೇ ಸೇವೆಗಳನ್ನು ಒದಗಿಸುವುದಿಲ್ಲ, ಸರಿಯಾದ ಎಸ್ಟಿಪಿ ಗಳನ್ನು ಹೊಂದಿದ್ದರೂ ಕೂಡ, ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತದಿಂದ ಅಪಾರ್ಟ್ ಮೆಂಟ್ ಗಳು ಬೆದರಿಕೆಗೆ ಒಳಗಾಗುತ್ತಿದೆ ಎನ್ನುವುದು ಅಪಾರ್ಟ್ ಮೆಂಟ್ ಗಳ ಕೂಗಾಗಿದೆ.

   ಡಿಸೆಂಬರ್ 2ಕ್ಕೆ ಬಿಬಿಎಂಪಿ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ

   ನಗರದ ಅಪಾರ್ಟ್ ಮೆಂಟ್ ನಿವಾಸಗಳಿಗೆ ಡಬ್ಬಲ್ ಪೈಪಿಂಗ್ ಸಿಸ್ಟಂ ಮತ್ತು ಎಸ್.ಟಿ.ಪಿ(ಕೊಳಚೆ ನೀರು ಸಂಸ್ಕರಣಾ ಘಟಕ) ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿರುವ ಜಲಮಂಡಳಿ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳ ಅಸೋಸಿಯೇಷನ್ ಆನ್‌ ಲೈನ್ ಮೂಲಕ ಸಹಿ ಸಂಗ್ರಹಣ ಚಳವಳಿ ಆರಂಭಿಸಿದ್ದರು. ದಿನನಿತ್ಯ ಬಿಬಿಎಂಪಿ ಜಲಮಂಡಳಿ ಹೇರುತ್ತಿರುವ ಹೊಸ ತೆರಿಗೆಯನ್ನು ಕಟ್ಟಲಾಗದೆ ಕಂಗಾಲಾಗಿದ್ದಾರೆ.

   ಜಲಮಂಡಳಿ ಧೋರಣೆ

   ಜಲಮಂಡಳಿ ಧೋರಣೆ

   ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಜಲಮಂಡಳಿ ಧೋರಣೆ: ಬೆಂಗಳೂರಿಗರೇ ಫೇಸ್ಬುಕ್, ಟ್ವಿಟ್ಟರಿನಲ್ಲಿ ಸರಕಾರಕ್ಕೆ ದೂರು ಮುಟ್ಟಿಸಿ ಈಗಾಗಲೇ ಹಲವು ಬಗೆಯ ಸೆಸ್ ಹಾಗೂ ತೆರಿಗೆಗಳಿಂದ ತತ್ತರಿಸಿ ಹೋಗಿರುವ ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಈಗ ಬೆಂಗಳೂರು ಜಲಮಂಡಳಿ ಮತ್ತೊಂದು ಬರೆ ಎಳೆದಿದೆ.

   ಜಲಮಂಡಳಿ ನಿಲುವಿನಿಂದ ನಿವಾಸಿಗಳನ್ನು ತೀವ್ರ ಸಂಕಷ್ಟಕ್ಕೀಡುಮಾಡಿದೆ. ಈಗಾಗಲೇ ಅಪಾರ್ಟ್ ಮೆಂಟ್ ನಿವಾಸಿಗಳು ಆಸ್ತಿ ತೆರಿಗೆ, ನೀರಿನ ಬಿಲ್, ವಿದ್ಯುತ್ ಶುಲ್ಕ, ತ್ಯಾಜ್ಯ ಸಂಸ್ಕರಣಾ ಶುಲ್ಕ ಹೀಗೆ ವಿವಿಧ ರೀತಿಯಿಂದ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತಿದೆ ಎಂಬ ವಿಚಾರವನ್ನಾಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜತೆಗೆ ಸಂಹಿ ಸಂಗ್ರಹಣೆ ಮಾಡಿದ್ದಾರೆ.

   ಅಪಾರ್ಟ್ ಮೆಂಟ್ ನಿವಾಸಿಗಳಿಂದ ಪ್ರತಿಭಟನೆ

   ಅಪಾರ್ಟ್ ಮೆಂಟ್ ನಿವಾಸಿಗಳಿಂದ ಪ್ರತಿಭಟನೆ

   ಅಪಾರ್ಟ್ ಮೆಂಟ್ ನಿವಾಸಿಗಳ ಮೇಲಾಗುತ್ತಿರುವ ನಿರಂತರ ಕಿರುಕುಳ ವಿಚಾರವಾಗಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು, ಎಚ್' ಎಸ್ ಆರ್ ಲೇಔಟ್, ಬೆಳ್ಳಂದೂರು, ಬನ್ನೇರುಘಟ್ಟ, ಕನಕಪುರ, ಜೆಪಿ ನಗರ, ಜಯನಗರ, ವಿಲ್ಸನ್ ಗಾರ್ಡನ್, ಓಲ್ಡ್ ಏರ್ ಪೋರ್ಟ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಮೈಸೂರು ರಸ್ತೆ, ಸಂಜಯನಗರ, ಮಲ್ಲೇಶ್ವರಂ, ಹೆಬ್ಬಾಳ ಇನ್ನಿತರೆ ಪ್ರದೇಶಗಳಿಂದ ಸಾವಿರಕ್ಕಿಂತ ಹೆಚ್ಚು ಅಪಾರ್ಟ್ ಮೆಂಟ್ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

   ಪ್ರತಿಭಟನೆ ನಡೆಸಲು ಮುಖ್ಯ ಕಾರಣಗಳು

   ಪ್ರತಿಭಟನೆ ನಡೆಸಲು ಮುಖ್ಯ ಕಾರಣಗಳು

   ಮೂರು ವರ್ಷಗಳ ಹಿಂದೆ ಶೇ. 300ರಷ್ಟು ನೀರಿನ ತೆರಿಗೆ ಹೆಚ್ಚಿಸಲಾಗಿತ್ತು. ಆಗಲೂ ನಾವು ವಿರೋಧಿಸಿದ್ದವು. ನಾವು ಹೆಚ್ಚು ಪ್ರಮಾಣದಲ್ಲಿ ನೀರಿನ ಬಳಕೆದಾರರು ಎಂಬ ಕಾರಣಕ್ಕೆ ಶೇ.300ರಷ್ಟು ಹೆಚ್ಚಳ ಮಾಡಲಾಗಿತ್ತು. ಇದೀಗ ಡಬ್ಬಲ್ ಪೈಪಿಂಗ್ ಸಿಸ್ಟಂ ಅಳವಡಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಅಸೋಸಿಯೇಷನ್ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

   ಸಿದ್ದರಾಮಯ್ಯ ಅವರಿಗೆ ಮನವಿ

   ಸಿದ್ದರಾಮಯ್ಯ ಅವರಿಗೆ ಮನವಿ

   ಈಗ ಆನ್ ಲೈನ್ ಮೂಲಕ ಸಹಿ ಸಂಗ್ರಹಣ ಚಳವಳಿ ಆರಂಭಿಸಿರುವ ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳು ಈಗಾಗಲೇ ನಿರ್ಮಾಣಗೊಂಡ ಕಟ್ಟಡಗಳಿಗೆ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

   ಮೆರವಣಿಗೆಯು ಶನಿವಾರ ಬೆಳಗ್ಗೆ 9.30 ರಿಂದ ಪ್ರಾರಂಭವಾಗಿದ್ದು ಮಧ್ಯಾಹ್ನ 12 ರವರೆಗೆ ನಡೆಯಲಿದೆ. ನಂತರ ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳು ಈಗಾಗಲೇ ನಿರ್ಮಾಣಗೊಂಡ ಕಟ್ಟಡಗಳಿಗೆ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Thousands of Apartment residents formed human chain at many places in Bengaluru saturday to oppose the government order on STP installation of retrospective effect.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ