ಪಾಲಿಕೆ ಸಮೀಕ್ಷೆ: ಟಿವಿ ಮಾಧ್ಯಮಗಳ ಭವಿಷ್ಯ ಸುಳ್ಳಾಗಿದ್ದೇಕೆ?
ಬೆಂಗಳೂರು, ಆಗಸ್ಟ್ 26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗದ್ದುಗೆ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಪಾಲಿಕೆ ಚುನಾವಣೆ ಫಲಿತಾಂಶಕ್ಕೂ ಬಂದ ಚುನವಣೋತ್ತರ ಸಮೀಕ್ಷೆಗಳು ಬಹುತೇಕ ಸತ್ಯಕ್ಕೆ ದೂರವಾಗಿತ್ತು. ಒಂದೆರಡು ಸುದ್ದಿ ವಾಹಿನಿಗಳು ಮಾತ್ರ ನಾವು ನೀಡಿದ ಸಮೀಕ್ಷೆ ಸತ್ಯ, ನಿಖರ ಎಂದು ಘೋಷಿಸಿಕೊಂಡಿವೆ.
ಬಿಜೆಪಿಗೆ ಮತದಾರ ಪ್ರಭು ಮತ್ತೊಮ್ಮೆ ಮನ್ನಣೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ಮಾಧ್ಯಮಗಳಿಗೂ ಥಟ್ ಅಂಥಾ ಒಂದೇ ಉತ್ತರ ಹೇಳಲು ಸಿಗುತ್ತಿಲ್ಲ. ಬಿಜೆಪಿ ಗೆಲುವಿ ಮತದಾರರಲ್ಲಿ ಹೆಚ್ಚಿನ ಗೊಂದಲ ಮೂಡಿದ್ದೆ ಕಾರಣ ಎನ್ನಬಹುದು. ಕಾಂಗ್ರೆಸ್ ಹೆಚ್ಚಿನ ಗೊಂದಲ ಮೂಡಿಸಿದ್ದರಿಂದ ಸೋಲಬೇಕಾಯಿತು. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]

ಸುವರ್ಣ ಸುದ್ದಿ ವಾಹಿನಿ ಹಾಗೂ ಜನಶ್ರೀ ಸುದ್ದಿ ವಾಹಿನಿಗಳು ಮಾತ್ರ ಬಿಜೆಪಿ ಶತಕದ ಕನಸು ಕಾಣಬಹುದು ಎಂದು ಹೇಳಿ ನೇರ ದಿಟ್ಟ ನಿರಂತರ ಸುದ್ದಿ ನೀಡಿದೆವು ಎಂದು ಘೋಷಿಸಿಕೊಂಡಿವೆ. ಉಳಿದ ವಾಹಿನಿಗಳ ಸಮೀಕ್ಷೆ ವರದಿ ಹೀಗಿತ್ತು:
ವಿಜಯವಾಣಿ- ಈಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 101 ಸ್ಥಾನಗಳ ನಿರೀಕ್ಷೆಯಿದ್ದು, ಬಿಜೆಪಿ ಬಲ 75 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಬಲ 20 ಸ್ಥಾನಗಳಿಗೆ ವೃದ್ಧಿಸಲಿದೆ ಎಂದು ಹೇಳಲಾಗಿತ್ತು. [ಬಿಜೆಪಿ ಗೆಲುವಿನ ರಹಸ್ಯ ಬಿಚ್ಚಿಟ್ಟ ವಕ್ತಾರ ಪ್ರಕಾಶ್]

ಟಿವಿ9-ಸಿ ವೋಟರ್ ಸಮೀಕ್ಷೆಯಂತೆ
ಕಾಂಗ್ರೆಸ್- 90 ರಿಂದ 98 ಸ್ಥಾನ
ಬಿಜೆಪಿ - 83 ರಿಂದ 91
ಜೆಡಿಎಸ್- 9 ರಿಂದ 17
ಇತರೆ- 0-8
ಪಬ್ಲಿಕ್ ಟಿವಿ
ಕಾಂಗ್ರೆಸ್- 85 ರಿಂದ 95
ಬಿಜೆಪಿ- 80 ರಿಂದ 90
ಜೆಡಿಎಸ್- 15 ರಿಂದ 17
ಚುನಾವಣಾ ಪೂರ್ವ ಸಮೀಕ್ಷೆ
* ಬಿಜೆಪಿ - 80 ರಿಂದ 90
* ಕಾಂಗ್ರೆಸ್ 85 ರಿಂದ 95
* ಜೆಡಿಎಸ್ 12 ರಿಂದ 17
* ಇತರರು 01 ರಿಂದ 05
ಬಿ ಟಿವಿ ಸಮೀಕ್ಷೆ
ಕಾಂಗ್ರೆಸ್- 82 ರಿಂದ 90
ಬಿಜೆಪಿ-75 ರಿಂದ 84
ಜೆಡಿಎಸ್- 10 ರಿಂದ 16
ಇತರೆ- 5 ರಿಂದ 6
ಪ್ರಜಾ ಟಿವಿ
ಕಾಂಗ್ರೆಸ್- 95 ರಿಂದ 107
ಬಿಜೆಪಿ- 76 ರಿಂದ 84
ಜೆಡಿಎಸ್- 14 ರಿಂದ 18
ಇತರೆ- 5












Click it and Unblock the Notifications