ನಮ್ಮ ಮೆಟ್ರೋ 2 ನೇ ಹಂತ 2020 ರ ಹೊತ್ತಿಗೆ ಸಂಪೂರ್ಣ
ಉದ್ಯಾನ ನಗರಿಯ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮ್ಮ ಮೆಟ್ರೋದ ಎರಡನೇ ಹಂತ 2020 ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಬೆಂಗಳೂರು,
ಮೇ 06: ಉದ್ಯಾನ ನಗರಿಯ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮ್ಮ ಮೆಟ್ರೋದ ಎರಡನೇ ಹಂತ 2020 ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈಗಾಗಲೇ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಗೆ 27 ತಿಂಗಳ ಸಮಯಾವಕಾಶ ನೀಡಲಾಗಿದ್ದು, ಮೆಟ್ರೋ ಎರಡನೇ ಹಂತ ಪ್ರಾರಂಭವಾದರೆ ವೈಟ್ ಫೀಲ್ಡ್, ಇಲೆಕ್ಟ್ರಾನಿಕ್ ಸಿಟಿಗಳಲ್ಲೂ ಮೆಟ್ರೋ ಸಂಚಾರ ಆರಂಭವಾಗಲಿದೆ.[ನಮ್ಮ ಮೆಟ್ರೋ ಮೊದಲ ಹಂತ ಮೇ ಅಂತ್ಯಕ್ಕೆ ಸಂಪೂರ್ಣ] id="toptextpromo"> id='are-slot-1' class='oiad oi-axt oiadv'>id='top-searched-articles'>
ಆರು
ವರ್ಷಗಳ ಸುದೀರ್ಘ ಅವಧಿಯನ್ನು ತೆಗೆದುಕೊಂಡ 'ನಮ್ಮ ಮೆಟ್ರೊ' ಮೊದಲ ಹಂತಕ್ಕೆಈಗಾಗಲೇ ಅಂತಿಮ ಸ್ಪರ್ಶ ದೊರೆತಿದ್ದು, ಈ ತಿಂಗಳ ಕೊನೆಯಲ್ಲಿ ರೈಲು ಸಂಚಾರ ಆರಂಭವಾಗುವ ಶುಭ ಸುದ್ದಿ ಸಿಕ್ಕಿದೆ. ಮೆಟ್ರೊ ಎರಡನೇ ಹಂತ ಮೊದಲ ಹಂತದಂತೆ ವಿಳಂಬ ಗತಿಯಲ್ಲಿ ಸಾಗದೆ, ಹಾಕಿಕೊಂಡ ಡೆಡ್ ಲೈನ್ ಅನ್ನು ಬಹುಬೇಗನೇ ತಲುಪಿದರೆ ಉದ್ಯಾನ ನಗರಿಯ ಸಂಚಾರ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದಂತೂ ಖಂಡಿತ.











Click it and Unblock the Notifications