Get Updates
Get notified of breaking news, exclusive insights, and must-see stories!

ಗೂಂಡಾ ಕಾಯ್ದೆ ಎಫೆಕ್ಟ್‌‌: ಇಬ್ಬರು ಕಾಮುಕರು ಅರೆಸ್ಟ್‌‌

ಬೆಂಗಳೂರು,ಆ.2: ಗೂಂಡಾ ಕಾಯ್ದೆ ಅಡಿಯಲ್ಲಿ ಇಬ್ಬರು ಲೈಂಗಿಕ ಅಪರಾಧಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅವಲಹಳ್ಳಿ ಹೊಕೋಟೆಯ ಶಿವರಾಮರೆಡ್ಡಿ(28),ಹೊಸಕೆರೆಹಳ್ಳಿ ನಾರಾಯಣ(27) ಬಂಧಿತರು. ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ನಗರ ಪೊಲೀಸ್‌ ಆಯುಕ್ತರ ಆದೇಶದ ಮೇರೆಗೆ ಬಂಧಿಸಲಾಗಿದೆ.[ಗೂಂಡಾ ಕಾಯ್ದೆ ಏನಿದು? ಈಗ ಸುದ್ದಿಯಲ್ಲೇಕಿದೆ?]

ಮಹಿಳೆಯರ ಪಿ.ಜಿಗೆ ನುಗ್ಗಿ ಕಳ್ಳತನ: ಸುಲಿಗೆ, ದರೋಡೆ ಮೊದಲಾದ ಕೃತ್ಯಗಳಲ್ಲಿ ಭಾಗಿಯಾಗಿದ್ದ ಶಿವರಾಮರೆಡ್ಡಿ ಮಹಿಳೆಯರ ಪಿ.ಜಿಗೆ ನುಗ್ಗಿ ಲೈಂಗಿಕ ದೌರ್ಜ‌ನ್ಯ ಎಸಗಿ ಕಳ್ಳತನ ಮಾಡುವ ಚಾಳಿ ಬೆಳೆಸಿಕೊಂಡಿದ್ದ.

ಇತ್ತೀಚೆಗೆ ಜೂನ್‌ 6ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಪಿ.ಜಿಗೆ ನುಗ್ಗಿ, ಕೊಠಡಿಯಲ್ಲಿದ್ದ ಯುವತಿಗೆ ಹಣ ನೀಡುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಯುವತಿ ಪ್ರತಿಭಟಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯ ಪರ್ಸ್‍ನಲ್ಲಿದ್ದ ಹಣವನ್ನು ಕಿತ್ತುಕೊಂಡು ಹೋಗಿ ಪರಾರಿಯಾಗಿದ್ದ.

rape 33

ರೇಪ್‌ ಮಾಡಿ ಕೊಲೆ ಬೆದರಿಕೆ: ಸುಲಿಗೆ, ಡಕಾಯಿತಿ ಮೊದಲಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಾರಾಯಣ ಜೂನ್‌. 20 ರಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ. ಅಂದು ಬಾಪುಜಿನಗರದಲ್ಲಿರುವ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಾಲಕಿಯನ್ನು ಆಟೋದಲ್ಲಿ ಅಪಹರಿಸಿ, ಗಿರಿನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ.

ಈ ವಿಚಾರವನ್ನು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿ ಮೇಲೆ ಬೆದರಿಕೆ ಹಾಕಿದ್ದ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಬ್ಬರು ಆರೋಪಿಗಳನ್ನು ,ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ವಿಡಿಯೋ ಅಥವಾ ಆಡಿಯೋ ಪೈರೇಟ್ಸ್ ಚಟುವಟಿಕೆಗಳ ತಡೆ ಅಧಿನಿಯಮ 1985 (ಗೂಂಡಾ ಕಾಯ್ದೆ) ಅಡಿಯಲ್ಲಿ ಬಂಧಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+