ಸರ್ಕಾರಿ ಬಸ್ಸಿನಲ್ಲಿಯೇ ಗಂಡು ಮಗು ಹೆತ್ತ ತಾಯಿ!

ಈ ಘಟನೆ ನಡೆದಿರುವುದು ಬಳ್ಳಾರಿಯ ಬೆಳಗಲ್ ಕ್ರಾಸ್‌ನಲ್ಲಿ. ಬಳ್ಳಾರಿ ತಾಲೂಕಿನ ಹರಗಿನಡೋಣಿ ನಿವಾಸಿಯಾದ ಯನ್ನಪ್ಪ ಮತ್ತು ಬೆಂಕೆಮ್ಮ ದಂಪತಿ ಪುತ್ರಿ ಗೌರಮ್ಮ (25) ಅವರಿಗೆ 9 ತಿಂಗಳು ಪೂರ್ತಿಯಾದ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು.
ಕೆಎಸ್ಆರ್ ಟಿಸಿ ಬಸ್ ಬೆಳಗಲ್ ಕ್ರಾಸ್ ಬಳಿ ಬರುತ್ತಿದ್ದಂತೆ ಗೌರಮ್ಮರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಹೆರಿಗೆಗೆ ಅನುಕೂಲ ಮಾಡಿಕೊಡಲಾಗಿದೆ. 1 ಗಂಟೆ ನಂತರ ಬಸ್ಸಿನಲ್ಲಿದ್ದ ಸೂಲಿಗಿತ್ತಿಯ ಸಹಾಯದಿಂದ ಹೆರಿಗೆ ಮಾಡಿಸಲಾಗಿದ್ದು, ಗಂಡು ಮಗು ಜನಿಸಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರು ಆ್ಯಂಬುಲೆನ್ಸ್‌ಗೆ ಫೋನ್ ಮಾಡಿದ್ದರು. ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸುವ ವೇಳೆಗೆ ಗೌರಮ್ಮ ಅವರಿಗೆ ಹೆರಿಗೆಯಾಗಿತ್ತು. ತಾಯಿ ಮತ್ತು ಮಗುವನ್ನು ಪರೀಕ್ಷಿಸಿದ ವೈದ್ಯರು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು. ನಂತರ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.












Click it and Unblock the Notifications