Breaking: ಸಿರುಗುಪ್ಪ: ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಹೋದ ಅಗ್ನಿಶಾಮಕ ಬೋಟ್ ಪಲ್ಟಿ

ಬಳ್ಳಾರಿ, ಸೆ.8: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮುದೇನೂರು ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 8 ಜನರನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಯ ಬೋಟ್ ಮಗುಚಿ ಬಿದ್ದಿದೆ.

ಸಿರುಗುಪ್ಪ ತಾಲೂಕಿನ ಮುದೇನೂರು ಗ್ರಾಮದ ಶನೀಶ್ವರ ದೇವಸ್ಥಾನ ಮುಳುಗಡೆ ಆಗಿತ್ತು. ವೇದಾವತಿ ನದಿಯ ಬಳಿ ಈ ದೇವಸ್ಥಾನವಿದೆ. ದೇವಸ್ಥಾನದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದರು. ಈ ವೇಳೆ ಬೋಟ್ ಪಲ್ಟಿ ಆಗಿದೆ.

Siruguppa: fire brigade personnel Boat capsizes as they went to rescue people stuck in flood

ಬೋಟ್ ಪಲ್ಟಿ ಆದರೂ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ದೇವಸ್ಥಾನದ ಬಳಿ ತಲುಪಿದ್ದಾರೆ. ವೇದಾವತಿ ನದಿಯ ನೀರು ಹೆಚ್ಚಾಗುತ್ತಲೇ ಇದೆ. ಬೆಳಗ್ಗೆ ದೇವಸ್ಥಾನಕ್ಕೆ ಪೂಜಾರಿ ಹಾಗೂ ಭಕ್ತರು ಪೂಜೆಗೆ ತೆರಳಿದ್ದರು. 2009ರಲ್ಲಿ ಇದೇ ರೀತಿ ದೇವಸ್ಥಾನದಲ್ಲಿ ಸಿಲುಕಿಕೊಂಡವರನ್ನು ನೆನೆಯಬಹುದು. ಆಗ ಏರ್ ಲಿಫ್ಟ್ ಮೂಲಕ ಜನರನ್ನು ರಕ್ಷಣೆ ಮಾಡಲಾಗಿತ್ತು. ನೀರಿನ ಸೆಳೆತ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೋಟ್ ಮೂಲಕ ರಕ್ಷಣೆ ಕಾರ್ಯ ಕಷ್ಟ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+