ಬಸ್ ಟಿಕೆಟ್‌ನಲ್ಲೇ ಪ್ರೇಮ ಪತ್ರ ಬರೆದ ಕಂಡಕ್ಟರ್!
ಬಳ್ಳಾರಿ, ಜುಲೈ 10 : ಬಸ್ ಟಿಕೆಟ್‌ನಲ್ಲೇ ಪ್ರೇಮ ಸಂದೇಶ ಬರೆದು, ಫೋನ್ ನಂಬರ್ ಹಾಕಿ ಕೊಟ್ಟಿದ್ದ ಬಸ್ ಕಂಡೆಕ್ಟರ್‌ಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಳ್ಳಾರಿಯಲ್ಲಿ ಶುಕ್ರವಾರ ನಡೆದಿದೆ. ಲವ್ ಪ್ರಪೋಸ್ ಮಾಡಿದ ಕಂಡಕ್ಟರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಸ್ ಟಿಕೆಟ್ ಮೂಲಕ ಪ್ರೇಮ ನಿವೇದನೆ ಮಾಡಿದ ಕಂಡಕ್ಟರ್‌ನನ್ನು ಗೋಪಾಲ್ ಎಂದು ಗುರುತಿಸಲಾಗಿದೆ. ಬಳ್ಳಾರಿಯಿಂದ ಗೋನಾಳಕ್ಕೆ ಹೋಗುವ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಗೋಪಾಲ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. [ಭಗ್ನ ಪ್ರೇಮಿಗಳು ತಪ್ಪದೇ ನೋಡಬೇಕಾದ ವಿಡಿಯೋ]

ಇದೇ ಬಸ್ಸಿನಲ್ಲಿ ಓಡಾಡುವ ಕೌಲ್ ಬಜಾರ್ ಯುವತಿಯನ್ನು ಗೋಪಾಲ್ ಪ್ರೀತಿಸುತ್ತಿದ್ದ. ತನ್ನ ಪ್ರೀತಿಯನ್ನು ಆಕೆಗೆ ಹೇಳಲು ಹೊಸ ವಿಧಾನ ಹುಡುಕಿದ ಗೋಪಾಲ್ ಬಸ್ ಟಿಕೆಟ್‌ನಲ್ಲೇ ಪ್ರೇಮ ಪತ್ರ ಬರೆದಿದ್ದ, ಜೊತೆಗೆ ಫೋನ್ ನಂಬರ್ ಹಾಕಿದ್ದ. [ಮಗಳ ಪ್ರಿಯಕರನ ರುಂಡ ಚೆಂಡಾಡಿ ಶರಣಾದ ಅಪ್ಪ]
ಪ್ರೇಮ ಪತ್ರ ಹೀಗಿತ್ತು : 'ಹಾಯ್ ಯಾಕೋ ನಿನ್ನ ಹತ್ರ ಮಾತಾಡಬೇಕು ಅನ್ನಿಸ್ತಾ ಇದೆ. ಇದು ಲವ್ ಏನೋ ಗೊತ್ತಿಲ್ಲ' ಎಂದು ಬರೆದ ಗೋಪಾಲ್ ಕೆಳಗೆ ಅವನ ನಂಬರ್ ಹಾಕಿ ಇಂದು ಯುವತಿ ಕೈಗೆ ಕೊಟ್ಟಿದ್ದ.
ಪ್ರೇಮದ ಟಿಕೆಟ್ ನೋಡಿ ಕೋಪಗೊಂಡ ಯುವತಿ ಸಹಪ್ರಯಾಣಿಕರಿಗೆ ತಿಳಿಸಿದ್ದಾಳೆ. ಬಳಿಕ ಸಾರ್ವಜನಿಕರು ಗೋಪಾಲ್‌ಗೆ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications