ಬಳ್ಳಾರಿಯಲ್ಲಿ ಕ್ಲಿನಿಕ್‌ಗೆ ಬೀಗ; ನಕಲಿ ವೈದ್ಯ ಪೊಲೀಸರ ವಶಕ್ಕೆ
ಬಳ್ಳಾರಿ, ಏಪ್ರಿಲ್ 16 : ನಕಲಿ ಪ್ರಮಾಣ ಪತ್ರ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಮತ್ತು ಸ್ಟೀರಾಯ್ಡ್ ಬಳಸುತ್ತಿದ್ದ ನಕಲಿ ವೈದ್ಯನನ್ನು ಪತ್ತೆ ಹಚ್ಚಲಾಗಿದೆ. ಆರೋಪಿಯನ್ನು ಬಳ್ಳಾರಿ ಗ್ರಾಮೀಣ ಪೊಲೀಸರ ವಶಕ್ಕೆ ನೀಡಲಾಗಿದ್ದು, ತನಿಖೆಗೆ ಸೂಚನೆ ನೀಡಲಾಗಿದೆ.
ಗುರುವಾರ ಬಳ್ಳಾರಿ ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ ನಕಲಿ ವೈದ್ಯನನ್ನು ಪತ್ತೆ ಹಚ್ಚಿದೆ. ಬಳ್ಳಾರಿ ತಾಲೂಕಿನ ಮುಂಡರಗಿಯಲ್ಲಿ ನಕಲಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಲಾಗಿದೆ.
ಸೋಮಶೇಖರ್ ಎನ್ನುವವರು ಆರ್. ಎಂ. ಪಿ ಡಾಕ್ಟರ್ ನಕಲಿ ಪ್ರಮಾಣಪತ್ರ ಮತ್ತು ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಸ್ಟೀರಾಯ್ಡ್ ಬಳಸುತ್ತಿದ್ದ ಮತ್ತು ಓವರ್ ಡೋಸ್ ಔಷಧ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಮೆಡಿಕಲ್ ಅಸೋಸಿಯೇಶನ್‌ಗ ಸಂಬಂಧಿಸಿದ ಯಾವುದೇ ಪ್ರಮಾಣಪತ್ರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿಲ್ಲ. ನಕಲಿ ವೈದ್ಯ ಸೋಮಶೇಖರ್ ಅವರನ್ನು ಬಳ್ಳಾರಿ ಗ್ರಾಮೀಣ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಆರ್‌ಐಗಳು ಮತ್ತು ವಿಎಗಳು ಸಹ ಇದ್ದರು. ವೈದ್ಯರು ಓವರ್ ಡೋಸ್ ಔಷಧಿ ನೀಡುತ್ತಿದ್ದ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದು, ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ.












Click it and Unblock the Notifications