'ಡಿಕೆಶಿ ಬಗ್ಗೆ ಅಸಮಾಧಾನವಿಲ್ಲ, ಯಾರಿಗಾದ್ರು ಒಬ್ಬರಿಗೆ ಸಚಿವ ಸ್ಥಾನ ಸಿಗಲಿ'
Recommended Video

ಡಿಕೆಶಿ ಬಗ್ಗೆ ಅಸಮಾಧಾನವಿಲ್ಲ, ಯಾರಿಗಾದ್ರು ಒಬ್ಬರಿಗೆ ಸಚಿವ ಸ್ಥಾನ ಸಿಗಲಿ | Oneindia Kannada
ಬಳ್ಳಾರಿ, ಸೆಪ್ಟೆಂಬರ್.14: ಮಾಧ್ಯಮಗಳು ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಬಳ್ಳಾರಿ ಜಿಲ್ಲೆಯ ಆರು ಜನ ಶಾಸಕರ ಬೇಡಿಕೆ ಒಂದೇ. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆನ್ನುವುದು...ಎಂದು ಹೊಸಪೇಟೆ ವಿಜಯನಗರ ಶಾಸಕ ಆನಂದ್ ಸಿಂಗ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಡಿಕೆ ಶಿವಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇದರಿಂದ ನಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಶಿವಕುಮಾರ್ ನಮ್ಮ ಪಕ್ಷದ ಅನುಭವಿ ಹಿರಿಯ ನಾಯಕರು.
ಡಿಕೆಶಿ ಅವರನ್ನು ಬದಲಾವಣೆ ಮಾಡುವಂತೆ ನಮ್ಮ ಪಕ್ಷದ ಅಧ್ಯಕ್ಷರಿಗೆ ನಾವು ಯಾರೂ ಒತ್ತಡ ತಂದಿಲ್ಲ. ನಮ್ಮ ಜಿಲ್ಲೆಗೆ ಡಿಕೆಶಿಯವರು ಉಸ್ತುವಾರಿ ಸಚಿವರಾಗಿ ಬಂದಾಗ ಎಲ್ಲಾ ಶಾಸಕರು ಸ್ವಾಗತ ಮಾಡಿದ್ದೇವೆ.

ಜಿಲ್ಲೆಯ ಆರು ಜನ ಶಾಸಕರು ಡಿಕೆಶಿ ಅವರನ್ನ ಬದಲಾವಣೆ ಮಾಡಬೇಕೆಂದು ಯಾವತ್ತು ಆಲೋಚನೆ ಮಾಡಿಲ್ಲ. ಶಾಸಕರ ಬೇಡಿಕೆ ಒಂದೇ, ಯಾರಿಗಾದ್ರು ಸಚಿವ ಸ್ಥಾನ ಸಿಗಬೇಕು ಎಂದು ಆನಂದ್ ಸಿಂಗ್ ತಿಳಿಸಿದರು.












Click it and Unblock the Notifications