Ballari JDS Candidate: ಬಳ್ಳಾರಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ: ರಾತೋರಾತ್ರಿ ಪಕ್ಷ ಸೇರಿದ ಅನಿಲ್ ಲಾಡ್‌ಗೆ ಜೆಡಿಎಸ್ ಮಣೆ
ಬಳ್ಳಾರಿ, ಏಪ್ರಿಲ್ 19: ಕಾಂಗ್ರೆಸ್ ಟಿಕೆಟ್ ನೀಡದ ಕಾರಣ, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದ ಮಾಜಿ ಶಾಸಕ ಅನಿಲ್ ಲಾಡ್ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಅಸಮಾಧಾನಗೊಂಡಿದ್ದ ಅನಿಲ್ ಲಾಡ್, ಮಂಗಳವಾರ ತಡರಾತ್ರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಅನಿಲ್ ಲಾಡ್ ಕಳೆದ ರಾತ್ರಿಯೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇನ್ನು ನಿನ್ನೆ ತಡರಾತ್ರಿಯೇ ಜೆಡಿಎಸ್ ಸೇರ್ಪಡೆಗೊಂಡಿರುವ ಅನಿಲ್ ಲಾಡ್‌ಗೆ ಜೆಡಿಎಸ್ ಬಳ್ಳಾರಿ ನಗರ ವಿಧಾನಸಬಾ ಕ್ಷೇತ್ರ ಟಿಕೆಟ್ ನೀಡಿದೆ. ಇನ್ನು ಕಳೆದ ವಾರ ಪ್ರಕಟವಾಗಿದ್ದ ಜೆಡಿಎಸ್ ಪಟ್ಟಿಯಲ್ಲಿ ಮುನ್ನಾಭಾಯಿ ಎನ್ನುವವರಿಗೆ ಬಳ್ಳಾರಿ ನಗರ ವಿಧಾನಸಬಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿತ್ತು. ಆದರೆ ಮಾಜಿ ಶಾಸಕ ಅನಿಲ್ ಲಾಡ್ ದಿಢೀರ್ ಪಕ್ಷ ಸೇರ್ಪಡೆ ಕಾರಣ ಬಳ್ಳಾರಿಯ ಜೆಡಿಎಸ್ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ.
ಬಯಸಿದ ಕ್ಷೇತ್ರದಲ್ಲೇ ಅನಿಲ್ ಲಾಡ್ ಸ್ಪರ್ಧೆ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಕ್ಕೆ ಅಸಮಧಾನಗೊಂಡಿದ್ದ ಅನಿಲ್ ಲಾಡ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿ. ಹೀಗಾಗಿ ಏಪ್ರಿಲ್ 17ರಿಂದ ಚುನಾವಣೆ ಮುಗಿಯುವ ಮೇ 10 ವರೆಗೆಕಪ್ಪು ಬಟ್ಟೆ ಧರಿಸುವೆ ಎಂದು ಶಪಥ ಮಾಡಿದ್ದರು.

ಬಳ್ಳಾರಿ ನಗರದ ಟಿಕೆಟ್ ಅನ್ನು ಭರತ್ ರೆಡ್ಡಿಗೆ ನೀಡಿರುವ ಕಾಂಗ್ರೆಸ್ ನಾಯಕರ ಮೇಲೆ ತೀವ್ರ ಅಸಮಾಧಾನಗೊಂಡಿದ್ದ ಅನಿಲ್‌ಲಾಡ್, ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು, ತಾವು ಇಚ್ಛಿಸಿದ ಸ್ಥಳದಲ್ಲೇ ಸ್ಪರ್ಧೆ ಮಾಡುವ ಅವಕಾಶ ಪಡೆದಿದ್ದಾರೆ. ಎರಡು ಬಾರಿ ಶಾಸಕನಾಗಿ ಒಂದು ಬಾರಿ ರಾಜ್ಯ ಸಭಾ ಸದಸ್ಯರಾದ ಅನಿಲ್ ಲಾಡ್ ಬಳ್ಳಾರಿ ಜೆಡಿಎಸ್ ಅಭ್ಯರ್ಥಿಯಾಗಿ ಇಂದು( ಏಪ್ರಿಲ್ 19) ನಾಮಪತ್ರ ಸಲ್ಲಿಸಲಿದ್ದಾರೆ.











Click it and Unblock the Notifications