Get Updates
Get notified of breaking news, exclusive insights, and must-see stories!

ಹಗರಿಬೊಮ್ಮನಹಳ್ಳಿ: ಎಸಿ ಸ್ಫೋಟ, ಒಂದೇ ಕುಟುಂಬದ ನಾಲ್ವರು ಮೃತ

ಹಗರಿಬೊಮ್ಮನಹಳ್ಳಿ, ಏಪ್ರಿಲ್ 8: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಘೋರ ದುರಂತ ಸಂಭವಿಸಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಸಿಲುಕಿರುವ ಜನತೆ, ಹವಾ ನಿಯಂತ್ರಿತ ಸಾಧನ, ಫ್ಯಾನ್ ಬಳಕೆ ಮಾಡುವುದು ಸಾಮಾನ್ಯ ಸಂಗತಿ, ಇದೇ ರೀತಿ ಎಸಿ ಹಾಕಿಕೊಂಡು ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಎಸಿ ಸ್ಫೋಟ ಸಂಭವಿಸಿದ್ದು, ನಾಲ್ವರು ಚಿರನಿದ್ರೆಗೆ ಜಾರಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ AC ಸಾಧನ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Hagaribommanahalli: Four of A Family dead after Fire broke out due to electrical short circuit of AC

ಹಗರಿಬೊಮ್ಮನಹಳ್ಳಿಯ ಮರಿಯಮ್ಮನಹಳ್ಳಿಯಲ್ಲಿ ಸಂಭವಿಸಿದ ದುರಂತಕ್ಕೆ ಇಡೀ ಗ್ರಾಮವೇ ಮರುಗಿದೆ.
ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತರಾಗಿದ್ದಾರೆ. ಘಟನೆ ಬಗ್ಗೆ ಗ್ರಾಮಸ್ಥರಿಗೂ ತಡವಾಗಿ ತಿಳಿದು ಬಂದಿದೆ. ತಕ್ಷಣವೇ ತಮಗೆ ತೋಚಿದ ಮಾರ್ಗ ಬಳಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ, ಎಸಿ ಸ್ಪೋಟದ ಬಳಿಕ ಮನೆ ತುಂಬಾ ಬೆಂಕಿ ಹರಡಿಕೊಂಡಿದೆ.

Hagaribommanahalli: Four of A Family dead after Fire broke out due to electrical short circuit of AC

ಮೃತರನ್ನು ವೆಂಕಟ್ ಪ್ರಶಾಂತ್ (42), ಚಂದ್ರಕಲಾ (28), ಅದ್ವಿಕ್ (16), ಪ್ರೇರಣಾ (8) ಎಂದು ಗುರುತಿಸಲಾಗಿದೆ. ಇದೇ ಮನೆಯಲ್ಲಿ ವಾಸವಿದ್ದ ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ರಾಜಶ್ರೀ ಅವರು ಅಪಾಯದಿಂದ ಪಾರಾಗಿದ್ದಾರೆ.

ಸಚಿವ ಶ್ರೀರಾಮುಲು ಸಂತಾಪ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮರಿಯಮ್ಮನಹಳ್ಳಿ ಪಟ್ಟಣದ ಆತ್ಮೀಯರು ಹಾಗೂ ಬಿಜೆಪಿ ಮುಖಂಡರಾದ ರಾಘಣ್ಣ(ರಾಘವೇಂದ್ರ ಶೆಟ್ಟಿ) ಅವರ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ರಾಘಣ್ಣ ಅವರ ಹಿರಿಯ ಮಗ ಪ್ರಶಾಂತ, ಸೊಸೆ ಚಂದ್ರಕಲಾ ಹಾಗೂ ರಾಘಣ್ಣನವರ ಮೊಮ್ಮಕ್ಕಳಾದ ಅದ್ವಿಕ್, ಪ್ರೇರಣಾ ಅಸುನೀಗಿರುವ ಸುದ್ದಿ ತಿಳಿದು ಅತಂತ ದುಃಖವಾಗಿದೆ.

Recommended Video

      Rishab Pant ಅವರಿಗೆ ದಂಡ ವಿಧಿಸಿಲು ಅಸಲಿ ಕಾರಣವೇನು | Oneindia Kannada

      ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಸಕ್ತಿ ದಯ ಪಾಲಿಸಲಿ, ವಿದ್ಯುತ್ ಅವಘಡದಲ್ಲಿ ಗಾಯಗೊಂಡಿರುವ ರಾಘಣ್ಣ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಶ್ರೀರಾಮುಲು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+