ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ

Recommended Video

      ಡಿಕೆಶಿ ಹೆಗಲಿಗೆ ಬಳ್ಳಾರಿ ಲೋಕಸಭೆ ಚುನಾವಣೆ ಉಸ್ತುವಾರಿ..! | Oneindia Kannada

      ಬಳ್ಳಾರಿ , ಅಕ್ಟೋಬರ್ 8: ಬಳ್ಳಾರಿ ಲೋಕಸಭಾ ಉಪಚುನಾವಣೆ ಜವಾಬ್ದಾರಿ ಸಚಿವ ಡಿಕೆ ಶಿವಕುಮಾರ್ ಅವರ ಹೆಗಲೇರುವ ಸಾಧ್ಯತೆಗಳಿವೆ. ಈಗಾಗಲೇ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಉಪ ಚುನಾವಣೆಗೆ ದಿನಾಂಕ ಘೋಷಿಸಲಾಗಿದೆ.

      ಬಳ್ಳಾರಿ ರಾಜಕಾರಣದಲ್ಲಿ ದಿನನಿತ್ಯ ಕಿತ್ತಾಟ ನಡೆಯುತ್ತಲೇ ಇದೆ. ಡಿಕೆ ಶಿವಕುಮಾರ್ ಅವರು ಬಳ್ಳಾರಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಾರಕಿಹೊಳಿ ಸಹೋದರರು ದೂರುತ್ತಲೇ ಇದ್ದಾರೆ. ಹೀಗಿರುವಾಗ ಬಳ್ಳಾರಿ ಲೋಕಸಭಾ ಉಪ ಚುನಾವಣೆಯ ಜವಾಬ್ದಾರಿ ಡಿಕೆ ಶಿವಕುಮಾರ್ ಹೆಗಲೇರಲಿದೆಯೇ ಎಂದು ಕಾದು ನೋಡಬೇಕಿದೆ.

      ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಅಲ್ಪಾವಧಿ ಅವಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತ ಬಿಜೆಪಿ - ಕಾಂಗ್ರೆಸ್ ಅಭ್ಯರ್ಥಿಗಳು ಯಾರು? ಎನ್ನುವ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಬಿ. ಶ್ರೀರಾಮುಲು ರಾಜೀನಾಮೆ ನೀಡಿರುವ ಲೋಕಸಭಾ ಸ್ಥಾನಕ್ಕೆ ಬಿ. ಶ್ರೀರಾಮುಲು ಸೋದರಳಿಯ, ಕಂಪ್ಲಿಯ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರನ್ನು ಓಲೈಸಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದಾರೆ.

      DK Shivakumar To Get Responsibility Of Lok Sabha By-poll In Bellary

      ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸೇರಿ, ಜಿಲ್ಲೆಯ ಮಾಜಿ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ, ಸಂತೋಷ್ ಎಸ್. ಲಾಡ್, ಹಿರಿಯ ರಾಜಕಾರಣಿಗಾಳದ ಎನ್. ಸೂರ್ಯನಾರಾಯಣರೆಡ್ಡಿ, ಕೆ.ಸಿ. ಕೊಂಡಯ್ಯ, ರಾಜ್ಯಸಭಾ ಸದಸ್ಯ ನಾಸೀರ್ ಅಹ್ಮದ್, ಶಾಸಕರಾದ ಇ. ತುಕಾರಾಂ, ಬಿ. ನಾಗೇಂದ್ರ ಸೇರಿದಂತೆ ಅನೇಕ ರಾಜಕಾರಣಿಗಳ ಜೊತೆ ಉತ್ತಮ ಸ್ನೇಹಸಂಬಂಧ ಹೊಂದಿದ್ದು, ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

      2 ವಿಧಾನಸಭೆ ಹಾಗೂ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ಧವಾಗಿದ್ದರೂ ಕೊನೆಯ ಕ್ಷಣದ ಲೆಕ್ಕಾಚಾರಗಳು ಅಂತಿಮಗೊಳ್ಳಬೇಕಿದೆ. ಯಾವ ಪಕ್ಷಗಳಲ್ಲೂ ಹೆಚ್ಚಿನ ಉತ್ಸಾಹ ಕಂಡುಬರುತ್ತಿಲ್ಲ. ಆದರೂ 2019ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಕದನವಾದ್ದರಿಂದ ಅನಿವಾರ್ಯ ಸಿದ್ಧತೆ ಕಂಡುಬರುತ್ತಿದೆ.

      ಸಚಿವ ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಕೈಹಾಕಲು ಹೊರಟಿದ್ದ ಆಡಳಿತಾರೂಢ ಜೆಡಿಎಸ್, ಕಾಂಗ್ರೆಸ್​ಗೆ ದಿಢೀರ್ ಎದುರಾಗಿರುವ 'ಪಂಚ' ಕ್ಷೇತ್ರಗಳ ಫೈಟ್ ತುಸು ತಲೆಬೇನೆ ಹೆಚ್ಚಿಸಿದ್ದರೆ, ಸಂಪುಟ ವಿಸ್ತರಣೆ ಬಂಡಾಯದ ಲಾಭ ಪಡೆಯಲು ಕಾದು ಕುಳಿತಿದ್ದ ಬಿಜೆಪಿ ಪಾಲಿಗೆ ಅನಿರೀಕ್ಷಿತ ಹಾಗೂ ಅನಿವಾರ್ಯ ರಾಜಕೀಯ ಬೆಳವಣಿಗೆ.

      ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಗೆದ್ದು ಪ್ರತಿಷ್ಠೆ ಜತೆಯಲ್ಲೇ ಸರ್ಕಾರ ಉಳಿಸಿಕೊಳ್ಳುವುದು ಮಿತ್ರಪಕ್ಷಗಳಿಗೆ ಅನಿವಾರ್ಯವಾಗಿದ್ದರೆ, ಅಲುಗಾಡುತ್ತಿರುವ ಸರ್ಕಾರವನ್ನು ಉಪ ಚುನಾವಣೆ ಗೆಲುವಿನ ಸಂಭ್ರಮದ ಬಿರುಗಾಳಿಯಲ್ಲೇ ಬೀಳಿಸುವುದು ಬಿಜೆಪಿಯ ಲೆಕ್ಕಾಚಾರ. ಇಂತಹ ಸಮಯದಲ್ಲಿ ಮೂರು ಸ್ಥಾನಗಳ ಲೋಕಸಭೆ ಉಪಸಮರ ಹೊಸ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+