ಕೆ-ಸೆಟ್ ಪರೀಕ್ಷೆಯಲ್ಲಿ ಮೂರನೇ ರಾಂಕ್ ಪಡೆದ ದೆಬಶ್ರೋ ಸನ್ಯಾಸಿ
ಬಳ್ಳಾರಿ, ಜೂನ್. 01: "ನನಗೆ ಇದು ಅನಿರೀಕ್ಷಿತ ಫಲಿತಾಂಶ. ನಾನು ರಾಂಕ್ ನಿರೀಕ್ಷಿಸಿರಲಿಲ್ಲ. ಒಳ್ಳೆಯ ಫಲಿತಾಂಶ ಬಂದಿದೆ. ಇಂಜಿನಿಯರಿಂಗ್ ಓದುವ ಗುರಿ ಹೊಂದಿದ್ದು, ಜೆಇಇ ಅಡ್ವಾನ್ಸ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವೆ' ಎಂದರು ದೆಬಶ್ರೋ ಸನ್ಯಾಸಿ (17).
ಕೆ-ಸೆಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರಾಂಕ್ ಬಂದ ಹಿನ್ನಲೆಯಲ್ಲಿ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ದೆಬಶ್ರೋ ಸನ್ಯಾಸಿ, ಜಿಂದಾಲ್ ನ ಆದರ್ಶ ವಿದ್ಯಾಲಯದ ವಿದ್ಯಾರ್ಥಿ. ಎರಡು ವರ್ಷಗಳ ಕಾಲ ಅವಂತಿ ಲರ್ನಿಂಗ್ ಸೆಂಟರ್' ಸಂಸ್ಥೆಯಲ್ಲಿ ಜೆಇಇ ಪರೀಕ್ಷಾ ಪೂರ್ವಭಾವಿ ತರಬೇತಿ ಪಡೆದಿದ್ದಾರೆ.

ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ದೆಬಶ್ರೋ ತಂದೆ, ಜಿಂದಾಲ್ ಸ್ಟೀಲ್ಸ್ ನಲ್ಲಿ ಅಸಿಸ್ಟೆಂಟ್ ಜನರಲ್ ಮೇನೇಜರ್ ಆಗಿದ್ದಾರೆ.

ಇನ್ನು ನಾರಾಯಣ ಕಾಲೇಜಿನ ವಿದ್ಯಾರ್ಥಿ ಎಸ್.ಆರ್. ಅಪರೂಪ ಕೆ-ಸೆಟ್ ಪರೀಕ್ಷೆಯಲ್ಲಿ ಮೂರನೇ ರಾಂಕ್ ಪಡೆದಿದ್ದಾರೆ.












Click it and Unblock the Notifications