ಶಿವಕುಮಾರ್ ಎಲ್ಲಿದೀಯಪ್ಪ...? ಡಿಕೆಶಿಗೆ ಕಾಲೆಳೆದ ಶ್ರೀರಾಮುಲು

Recommended Video

      ಡಿ.ಕೆ.ಶಿವಕುಮಾರ್ ಅವರನ್ನು ಲೇವಡಿ ಮಾಡಿದ ಬಿ.ಶ್ರೀರಾಮುಲು | Oneindia Kannada

      ಬಳ್ಳಾರಿ, ಜೂನ್ 24: "ಶಿವಕುಮಾರ್ ಎಲ್ಲಿದೀಯಪ್ಪ..." ಎಂದು ಜನರು ನಿಮ್ಮನ್ನು ಲೇವಡಿ ಮಾಡುತ್ತಿದ್ದಾರೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ ಶ್ರೀರಾಮುಲು ಕಾಲೆಳೆದಿದ್ದಾರೆ.

      ಚುನಾವಣೆಯ ಸಮಯದಲ್ಲಿ ಮಾತ್ರ ಬಳ್ಳಾರಿಗೆ ಬರುತ್ತೀರಿ. ಬಳ್ಳಾರಿಯ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು, ಬಳ್ಳಾರಿಯ ಮಂತ್ರಿಗಳಿಗೇ ಜಿಲ್ಲೆಯ ಉಸ್ತುವಾರಿ ನೀಡಿ ಎಂದು ಶ್ರೀರಾಮುಲು ಹೇಳಿದರು.

      ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಕನಕಪುರ ಶಾಸಕ ಡಿಕೆ ಶಿವಕುಮಾರ್, 2018 ರಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣೀಕರ್ತರಾಗಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಅವರ ನಿರೀಕ್ಷೆ ಹುಸಿಯಾಗಿತ್ತು.

      ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮೇಲಿರುವ ಕುರುಡು ಪ್ರೇಮವೇ ಕಾರಣ ಎಂದು ಶ್ರೀರಾಮುಲು ದೂರಿದರು.

      ಶಿವಕುಮಾರ್ ಎಲ್ಲಿದ್ದೀಯಪ್ಪ?

      ಶಿವಕುಮಾರ್ ಎಲ್ಲಿದ್ದೀಯಪ್ಪ?

      ಶಿವಕುಮಾರ್ ಅಣ್ಣನವರೇ, ನಾನು ಬಳ್ಳಾರಿಯ ಮಣ್ಣಿನ ಮಗ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ನಿಮ್ಮನ್ನು ಜನ ಶಿವಕುಮಾರ್ ಎಲ್ಲಿದ್ದೀಯಪ್ಪ ಎನ್ನುತ್ತಿದ್ದಾರೆ. ಬಳ್ಳಾರಿಯ ಜನ ವಲಸೆ ಬಂದವರಿಗೆ ತಮ್ಮ ಸ್ವಾಭಿಮಾನದಿಂದ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಿಸಿದ್ದಾರೆ- ಬಿ. ಶ್ರೀರಾಮುಲು

      ಕುಮಾರಸ್ವಾಮಿ ಮೇಲಿನ ಕುರುಡು ಪ್ರೇಮ

      ಕುಮಾರಸ್ವಾಮಿ ಮೇಲಿನ ಕುರುಡು ಪ್ರೇಮ

      ರಾಜ್ಯ ಕಾಂಗ್ರೆಸ್ ಅನ್ನು ಕುಮಾರಸ್ವಾಮಿಯವರ ಮೇಲಿನ ನಿಮ್ಮ ಕುರುಡು ಪ್ರೇಮಕ್ಕಾಗಿ ಒಂದಂಕಿಗೆ ಇಳಿಸಿದ ಕೀರ್ತಿ ನಿಮಗೇ ಸಲ್ಲಬೇಕು. ಬಳ್ಳಾರಿಯ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು ಬಳ್ಳಾರಿಯ ಮಂತ್ರಿಗಳಿಗೆ ಯಾರಿಗಾದರೂ ಬಳ್ಳಾರಿಯ ಉಸ್ತುವಾರಿ ಸಚಿವರನ್ನಾಗಿ ಮಾಡಿ- ಬಿ. ಶ್ರೀರಾಮುಲು

      ಕೇವಲ ಚುನಾವಣಾ ಸಚಿವರಾಗಬೇಡಿ!

      ಕೇವಲ ಚುನಾವಣಾ ಸಚಿವರಾಗಬೇಡಿ!

      ಶುಭಮಹೂರ್ತ, ಶುಭ ಘಳಿಗೆಯಲ್ಲಾದರೂ ಇನ್ನು ಮುಂದೆ ಕೇವಲ ಚುನಾವಣಾ ಸಚಿವರಾಗದೆ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿ ಎಂದು ನಿಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇನೆ ಅಣ್ಣ- ಬಿ.ಶ್ರೀರಾಮುಲು

      ಡಿಕೆಶಿಗೆ ಮಹತ್ವದ ಜವಾಬ್ದಾರಿ ನೀಡಿದ್ದ ಕಾಂಗ್ರೆಸ್

      ಡಿಕೆಶಿಗೆ ಮಹತ್ವದ ಜವಾಬ್ದಾರಿ ನೀಡಿದ್ದ ಕಾಂಗ್ರೆಸ್

      ಬಳ್ಳಾರಿ ರಾಜಕೀಯದಲ್ಲಿ ಕಾಂಗ್ರೆಸ್ ನಾಯಕರ ಕಿತ್ತಾಟ ಶಮನಗೊಳಿಸಲು ಮತ್ತು ಆ ಕ್ಷೇತ್ರದಲ್ಲಿ ಪಕ್ಷದ ಶಕ್ತಿಯನ್ನು ಡಿಕೆ ಶಿವಕುಮಾರ್ ಅವರ ಹೆಗಲ ಮೇಲೆಯೇ ಲೋಕಸಭೆ ಚುನಾವಣೆಯ ಉಸ್ತುವಾರಿ ಹೊಣೆಯನ್ನು ಕಾಂಗ್ರೆಸ್ ಹಾಕಿತ್ತು. ಬಳ್ಳಾರಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀರಾಮುಲು ಅವರನ್ನು 'ಅಣ್ಣ ಅಣ್ಣ' ಎಂದು ಕಿಚಾಯಿಸುತ್ತಲೇ ಡಿಕೆಶಿ ಅವರು ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ವಶಕ್ಕೆ ಪಡೆದಿದ್ದರು. ಆದರೆ ಲೋಕಸಬೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅದನ್ನು ತನ್ನ ತೆಕ್ಕೆಗೆ ಪಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+