ಬಳ್ಳಾರಿಗೆ ಬಂದ ಅನಿಲ್ ಲಾಡ್ ಗೆ ಮಹಿಳೆಯರಿಂದ ಬೈಗುಳದ ಸ್ವಾಗತ
ಬಳ್ಳಾರಿ, ಏಪ್ರಿಲ್ 18 : ಬಳ್ಳಾರಿ ನಗರ ಕ್ಷೇತ್ರದ ಹಾಲಿ ಶಾಸಕ ಅನಿಲ್ ಎಚ್. ಲಾಡ್ ಗೆ ಅವರು ಭಾರೀ ಮೆರವಣಿಗೆಯಲ್ಲಿ ಬಳ್ಳಾರಿ ನಗರ ಪ್ರವೇಶ ಮಾಡಿ, ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಮಹಿಳೆಯರಿಂದ ಸೋಮವಾರ ಬೆಳಗ್ಗೆ ತೀವ್ರ ತರಾಟೆಗೆ ಒಳಗಾಗಿದ್ದಾರೆ.
ಅನಿಲ್ ಲಾಡ್ ಅವರಿಗೆ ಹಿಗ್ಗಾ ಮುಗ್ಗಾ ಬೈಯ್ಯುತ್ತ, ಶಾಸಕರಾಗಿ ಐದು ವರ್ಷ ಪೂರೈಸಿದ್ದೀರಿ, ಕುಡಿಯಲು ಸರಿಯಾಗಿ ನೀರು ಪೂರೈಸಿಲ್ಲ. ನಮ್ಮ ಸಂಕಷ್ಟ ಕೋಳೋರ್ಯಾರು ಅಂತಾ ಲಾಡ್ ಗೆ ಓತೋಪ್ರೇತವಾಗಿ ಹೀಯಾಳಿಸಿದರು.
ಮಹಿಳೆಯರನ್ನು ಸಮಾಧಾನಪಡಿಸಿ ತಮ್ಮ ರೋಡ್‍ಶೋ ಅನ್ನು ಮುಂದುವರೆಸಿಕೊಂಡು, ಮುಗುಳ್ನುತ್ತ – ಕೈಮುಗಿಯುತ್ತ ಮುಂದಕ್ಕೆ ಹೋದ ಅನಿಲ್ ಲಾಡ್, 'ಈ ಬಾರಿಯೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತೇನೆ. ನಿಮ್ಮ ಆಶೀರ್ವಾದ ಇರಲಿ' ಎನ್ನುತ್ತಾ ಹೋದರು.

ಅನಿಲ್ ಎಚ್. ಲಾಡ್ ಕಾಂಗ್ರೆಸ್‍ನ ಬಿ ಫಾರಂ ಅನ್ನು ಮಂಗಳವಾರ ಬೆಂಗಳೂರಿನಲ್ಲಿ ಪಡೆದು, ಬುಧವಾರ ನಗರಕ್ಕೆ ಆಗಮಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುವ ಚಿಂತೆನ ನಡೆಸಿದ್ದಾರೆ. ಬಿ. ಫಾರಂ ಹಿಡಿದುಕೊಂಡು ಬಂದಾಗಲೇ ಅವರಿಗೆ ನಗರದಲ್ಲಿ ಮಹಿಳೆಯರಿಂದ ಮಂಗಳಾರತಿ ಆಗಿದ್ದು, ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಒಂದು ರೀತಿಯಿಂದ ಬಲ ಬಂದಂತೆ ಆಗಿದೆ.












Click it and Unblock the Notifications