ಬಳ್ಳಾರಿಯಲ್ಲಿ ಗ್ರಾಂ. ಪಂಚಾಯಿತಿ ಸ್ಥಾನ ಹರಾಜು; ಎಫ್‌ಐಆರ್

ಬಳ್ಳಾರಿ, ಡಿಸೆಂಬರ್ 21: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹರಾಜು ಪ್ರಕ್ರಿಯೆ ಮೂಲಕ ಅವಿರೋಧವಾಗಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹರಾಜು ಹಾಕುವ ವಿಡಿಯೋ ವೈರಲ್ ಆಗಿದ್ದು, 10 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಸಿರುಗುಪ್ಪ ತಾಲೂಕಿನ ಸಿಂಧಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈಲೂರು ಗ್ರಾಮದಲ್ಲಿ ಭಾರೀ ಮೊತ್ತದ ಹಣ ಸಂಗ್ರಹಣೆ ಮೂಲಕ ಅವಿರೋಧ ಆಯ್ಕೆಯ ಪ್ರಕ್ರಿಯೆ ನಡೆದಿರುವ ಪ್ರಕರಣ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು.

ಈಗ ರಾಮದುರ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಂದ್ರಶೇಖರಪುರದಲ್ಲಿ ಹರಾಜು ಕೂಗುವ ಮೂಲಕ ಗ್ರಾಮ ಪಂಚಾಯತಿ ಸದಸ್ಯರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ.

Auction Of Gram Panchayat Member Post FIR Against 10 People

ಕೂಡ್ಲಿಗಿ ತಾಲೂಕು ಆಡಳಿತವು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ ಮುಖಂಡರ ವಿರುದ್ಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ. ಚಂದ್ರಶೇಖರಪುರ ಗ್ರಾಮದ 2 ಮತ್ತು 4ನೇ ಕ್ಷೇತ್ರಗಳಿಗೆ ನಾಲ್ಕು ಮಂದಿ ಸದಸ್ಯರನ್ನ ಆಯ್ಕೆ ಮಾಡಲಾಗಿದೆ.

ಶುಕ್ರವಾರ ಸಂಜೆ ಗ್ರಾಮದ ಸಮೀಪ ಇರುವ ದೇವಾಲಯದಲ್ಲಿ ಗ್ರಾಮದ ಮುಖಂಡರು ಸೇರಿ ದೇಗುಲದ ಹೆಸರಿನಲ್ಲಿ ಪ್ರತಿ ಸದಸ್ಯರಿಗೆ ರೂಪಾಯಿ 3.60 ಲಕ್ಷಕ್ಕೆ ಹರಾಜು ಹಾಕಲು ಮುಂದಾಗಿರುವ ವಿಡಿಯೊ ವೈರಲ್ ಆಗಿದೆ.

ಇದನ್ನ ಸೂಕ್ಷ್ಮವಾಗಿ ಗಮನಿಸಿದ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಕೂಡ್ಲಿಗಿ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಖಂಡರಾದ ಗೌಡ್ರ ಶರಣಪ್ಪ, ಹುಲಿಕುಂಟೆಪ್ಪ, ನಿಂಗಪ್ಪ, ಮಲಿಜಾತಪ್ಪ, ಅಂಜನಿ, ಬಸವರಾಜ, ಪ್ರಸನ್ನಕುಮಾರ್, ಪಾಪಣ್ಣ, ಸಾರಪ್ಪ, ಪತ್ರೆಪ್ಪ ವಿರುದ್ಧ ರಾಮದುರ್ಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಹರಾಜು ಹಾಕುವ ಹಲವು ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಸದಸ್ಯ ಸ್ಥಾನಗಳನ್ನು ಹರಾಜು ಮೂಲಕ ಅಥವಾ ದೇವಾಲಯಗಳಿಗೆ ಹಣ ನೀಡುವ ಮತ್ತು ಇತರೆ ವ್ಯವಹಾರಗಳ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸದೇ ಸದಸ್ಯರನ್ನು ಆಯ್ಕೆ ಮಾಡಬಾರದು ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+