ಕೊರೊನಾ ಪ್ರಕರಣ ಹೆಚ್ಚಳದಿಂದ ಹಂಪಿ ಕನ್ನಡ ವಿವಿಗೆ 5 ದಿನಗಳ ರಜೆ ಘೋಷಣೆ
ಬಳ್ಳಾರಿ, ಆಗಸ್ಟ್ 03: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ (ಆಗಸ್ಟ್ 3 ರಿಂದ 7ರವರೆಗೆ) ಸತತ ಐದು ದಿನಗಳ ಕಾಲ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ ಎಂದು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ರಜಾ ಅವಧಿ ದಿನಗಳಲ್ಲಿ ಆಯಾ ಅಧ್ಯಯನ, ಆಡಳಿತ ವಿಭಾಗದ ಮುಖ್ಯಸ್ಥರು, ನಿರ್ದೇಶಕರು, ಸಂಯೋಜನಾಧಿಕಾರಿ, ನಿಲಯ ಪಾಲಕರು, ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೂರವಾಣಿ ಮತ್ತು ಇ-ಮೇಲ್‌ಗಳ ಮೂಲಕ ಸಂಪರ್ಕಿಸಬೇಕು. ಆದರೆ, ಕೇಂದ್ರಸ್ಥಾನವನ್ನು ಬಿಡುವಂತಿಲ್ಲ. ಅಗತ್ಯವಿದ್ದಾಗ ವಿವಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಯನ ಮತ್ತು ಆಡಳಿತ ಸಿಬ್ಬಂದಿ ಮನೆಯಿಂದಲೇ ಕಾರ್ಯವನ್ನು ನಿರ್ವಹಿಸಬೇಕು. ಸಿಬ್ಬಂದಿಯ ಕರ್ತವ್ಯ ನಿರತ ರಜೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications