ಮೆಡಿಕಲ್ ಶಾಪ್ ಗೆ ತೆರಳಿದ್ದ ಯುವತಿಯ ಅಪಹರಣ
ಬಳ್ಳಾರಿ, ಏಪ್ರಿಲ್ 26: ಔಷಧಿ ತರಲೆಂದು ಮೆಡಿಕಲ್ ಶಾಪ್ ಗೆ ತೆರಳಿದ್ದ ಯುವತಿಯೊಬ್ಬಳನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ಬುಧವಾರ (ಏಪ್ರಿಲ್ 26) ಮಧ್ಯಾಹ್ನ ಹೊಸಪೇಟೆಯಲ್ಲಿ ನಡೆದಿದೆ.
ಅಂಬಿಕಾ (೧೯ ) ಅಪಹರಣಕ್ಕೆ ಒಳಗಾದ ಯುವತಿ.

ಶಹರ ಠಾಣಾ ವ್ಯಾಪ್ತಿಯ ಎಸ್ಎಲ್ ಚೌಕಿ ಬಳಿಯಲ್ಲಿನ ಮೆಡಿಕಲ್ ಶಾಪ್ ಗೆ ತೆರಳಿದ್ದಾಗ, ಬೈಕ್ ನಲ್ಲಿ ಬಂದ ಇಬ್ಬರು ಯುವತಿಯನ್ನು ಹೊತ್ತೊಯ್ದಿದ್ದಾರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.












Click it and Unblock the Notifications