ಬಳ್ಳಾರಿ ಚುನಾವಣಾ ಕಣದಲ್ಲಿ 12 ಅಭ್ಯರ್ಥಿಗಳು

ಬಳ್ಳಾರಿ, ಮಾ. 31 : ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾ ಕಣದ ಕುರಿತು ಅಂತಿಮ ಚಿತ್ರಣ ಲಭ್ಯವಾಗಿದ್ದು ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಗೆ ಶನಿವಾರ ಚಿಹ್ನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದ್ದಾರೆ.

ಮಾ.29ರ ಶನಿವಾರ ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಆದರೆ, ಯಾವ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯದ ಕಾರಣ, ಎಲ್ಲಾ ಅಭ್ಯರ್ಥಿಗಳು ಅಂತಿಮವಾಗಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಕಣದಲ್ಲಿದ್ದಾರೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದು, ಏ.17ರಂದು ಚುನಾವಣೆ ನಡೆಯಲಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

Bellary

ಕಣದಲ್ಲಿರುವ ಅಭ್ಯರ್ಥಿಗಳು : ಜೆಡಿಎಸ್ - ಆರ್. ರವಿನಾಯಕ, ಬಿಎಸ್ಪಿ - ಬಿ. ರಾಮುಡು, ಬಿಜೆಪಿ - ಬಿ.ಶ್ರೀರಾಮುಲು, ಕಾಂಗ್ರೆಸ್ - ಎನ್.ವೈ.ಹನುಮಂತಪ್ಪ, ಆಮ್ ಆದ್ಮಿ ಪಕ್ಷದ ಮಾಳಗಿ ಶಿವಕುಮಾರ ಗಿರಿಯಪ್ಪ ಪ್ರಮುಖ ಪಕ್ಷಗಳಿಂದ ಕಣದಲ್ಲಿದ್ದಾರೆ. [ಬಳ್ಳಾರಿ ಕ್ಷೇತ್ರದ ಪರಿಚಯ]

ಉಳಿದಂತೆ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಎ. ದೇವದಾಸ (ಗಾಜಿನಲೋಟ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ದೊಡ್ಡಮನಿ ಪ್ರಸಾದ್ (ಬಾವುಟದೊಳಗೆ ಮೂರು ನಕ್ಷತ್ರಗಳು), ಕರುನಾಡು ಪಕ್ಷದ ಜಿ. ನಟರಾಜ (ಬ್ಯಾಟುಗಾರ), ಕಾಮ್ರೇಡ್ ಎಸ್. ಭೀಮಪ್ಪ ( ಗರಗಸ), ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಕೆ. ರಾಘವೇಂದ್ರ (ಟೆಲಿವಿಷನ್).

ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಎನ್.ಬಿ. ಕೃಷ್ಣಪ್ಪ ನಾಯಕ (ಬ್ಯಾಟ್), ಎನ್.ಆರ್. ಮಲ್ಲಯ್ಯಸ್ವಾಮಿ (ಸೀಲಿಂಗ್ ಫ್ಯಾನ್) ಅಭ್ಯರ್ಥಿಗಳು ಕಣದಲ್ಲಿದ್ದು, ಜಿಲ್ಲಾ ಚುನಾವಣಾಧಿಕಾರಿ ಅವರಿಗೆ ಚಿಹ್ನೆಯನ್ನು ಹಂಚಿಕೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+