ಬ್ರೇಕಿಂಗ್ ನ್ಯೂಸ್: ಬಳ್ಳಾರಿಯಲ್ಲಿ 11 ಮಂದಿಗೆ ಕೊರೊನಾ ವೈರಸ್ ಪತ್ತೆ

ಬಳ್ಳಾರಿ, ಮೇ.21: ಕರ್ನಾಟಕದ ಪಾಲಿಗೆ ಮಹಾರಾಷ್ಚ್ರದ ನಂಟು ಮುಳುವಾಗುವ ಲಕ್ಷಣಗಳು ಎದ್ದು ಕಾಣುತ್ತಿದೆ. ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಮುಂಬೈನಿಂದ ವಾಪಸ್ ಆದ ಬಹುತೇಕರಿಗೆ ಕೊವಿಡ್-19 ಕನ್ಫರ್ಮ್ ಆಗುತ್ತಿದೆ.

ಬಳ್ಳಾರಿಯಲ್ಲಿ ಗುರುವಾರ 11 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ 93 ಮಂದಿಯ ಪೈಕಿ 11 ಮಂದಿಗೆ ಕೊವಿಡ್-19 ಪತ್ತೆಯಾಗಿದೆ.

ಬೆಳ್ಳಂಬೆಳಗ್ಗೆ ಬಳ್ಳಾರಿಯಲ್ಲಿ 11 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯು 19 ರಿಂದ 30ಕ್ಕೆ ಏರಿಕೆಯಾಗಿದೆ.

11 Coronavirus Positive Cases Found In ballari Today

ಕ್ವಾರೆಂಟೈನ್ ನಲ್ಲಿ ಇದ್ದವರಿಗೆ ಹೆಚ್ಚಿದ ಆತಂಕ:

ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ 93 ಮಂದಿಯನ್ನು ಬಳ್ಳಾರಿಯ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಹೀಗೆ ಕ್ವಾರೆಂಟೈನ್ ನಲ್ಲಿ ಇರಿಸಿದ 11 ಮಂದಿಗೆ ಸೋಂಕು ತಗಲಿರುವುದು ದೃಢಪಡುತ್ತಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಕ್ವಾರೆಂಟೈನ್ ನಲ್ಲಿ ಸೋಂಕಿತರ ಜೊತೆಗೆ ಉಳಿದುಕೊಂಡವರಿಗೂ ಕೊವಿಡ್-19 ತಗಲಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+