• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಗಲಕೋಟೆ: ಸೈಕ್ಲಿಂಗ್ ವೇಳೆ ಸಾವನ್ನಪ್ಪಿದ ಮಾಜಿ ಶಾಸಕರ ಪುತ್ರ ವಿನೋದ್

|

ಬಾಗಲಕೋಟೆ, ಸೆಪ್ಟೆಂಬರ್ 13: ಬಾಗಲಕೋಟೆ ಸೈಕ್ಲಿಂಗ್ ಕ್ಲಬ್ ಸದಸ್ಯ, ಅಮೆಚೂರ್ ಸೈಕ್ಲಿಸ್ಟ್ ವಿನೋದ ಪಾಟೀಲ ಅವರು ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೀಳಗಿ ಕ್ಷೇತ್ರದ ಮಾಜಿ ಶಾಸಕ ಎಸ್.ಎಸ್ ಪಾಟೀಲ ಪುತ್ರ ವಿನೋದ್, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉದ್ಯಗಿಯಾಗಿದ್ದು, ಕ್ಲಬ್ ನ ಉಳಿದ ಸದಸ್ಯರೊಂದಿಗೆ ನಿತ್ಯ ಸೈಕ್ಲಿಂಗ್ ಹೋಗುತ್ತಿದ್ದರು. ನಿನ್ನೆ ಶನಿವಾರ ಅವರು 70 ಕಿ.ಮೀ ಸೈಕಲ್ ನಲ್ಲಿ ಕ್ರಮಿಸಿದ್ದರು.

ಬಾದಾಮಿ ತಹಶೀಲ್ದಾರ ಸುಹಾಸ್ ಇಂಗಳೆ ಮೇಲೆ ಹಲ್ಲೆ: ಇಬ್ಬರ ಬಂಧನ

ವಿನೋದ್ ಅವರು ಫೇಸ್ಬುಕ್ ನಲ್ಲಿ ""ಸೆಂಚುರಿ ಬಾರಿಸುವ ಅವಕಾಶ ತಪ್ಪಿಸಿಕೊಂಡೆ, ಭಾನುವಾರ 100 ಕಿ.ಮೀ ಕ್ರಮಿಸುವೆ ಎಂದು ಶನಿವಾರ ಬರೆದುಕೊಂಡಿದ್ದರು. ಎಂದಿನಂತೆ ಬಾಗಲಕೋಟೆಯ ಮನೆಯಿಂದ ಸೈಕ್ಲಿಂಗ್ ಗೆ ತೆರಳಿದ್ದರು.

ಬಾದಾಮಿ ತಾಲ್ಲೂಕಿನ ಕೆರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸೈಕಲ್ ಓಡಿಸುವಾಗ ಹೃದಯಾಘಾತವಾಗಿದೆ. ಸೈಕ್ಲಿಂಗ್ ತಂಡದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

   ಭಾರತದ ಕಣ್ತಪ್ಪಿಸಿ ಸರೋವರದ ಬಳಿ ಬಂದ ಚೀನಾ. | Oneindia Kannada

   ನಂತರ ಕೆರೂರು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ವಿನೋದ ಅವರು ಮೃತಪಟ್ಟಿದ್ದಾರೆ ಎಂದು ಮಾಜಿ ಅಂತರಾಷ್ಟ್ರೀಯ ಸೈಕ್ಲಿಸ್ಟ್ ಸಿದ್ದು ಸರವಾರಿ ಅವರು ಹೇಳಿದ್ದಾರೆ. ವಿನೋಓದ ಅವರಿಗೆ ಪತ್ನಿ, ಪುತ್ರ ಇದ್ದಾರೆ.

   English summary
   Bagalkote cycling club member, Amateur cyclist Vinod Patil, died of a heart attack on Sunday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X