ಸಿದ್ದರಾಮಯ್ಯ ಬಳಿ ಬಾಡಿಗೆ ಪಡೆಯದೆ ಮನೆ ಕೊಡಲು ಮುಂದಾದ ಅಭಿಮಾನಿ
Recommended Video

ಬಾಗಲಕೋಟೆ, ಜೂನ್.18: ಬಾದಾಮಿ ಮತಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ಬಾಡಿಗೆ ಪಡೆಯದೆ ಮನೆಯನ್ನು ಕೊಡಲು ಅಭಿಮಾನಿಯೊಬ್ಬರು ಮುಂದೆ ಬಂದಿದ್ದಾರೆ.
ಹೌದು, ಬಾದಾಮಿ ಪಟ್ಟಣದ ಜಯನಗರದ ಎಸ್.ಎಫ್. ಹೊಸಗೌಡರ ಕಾಲೋನಿಯಲ್ಲಿರುವ ಮನೆಯನ್ನು ಸಿದ್ದರಾಮಯ್ಯ ಅಭಿಮಾನಿ ಶಂಕರಗೌಡ ಕೆಳಗಿನಮನಿ ಎಂಬುವವರು ಬಾಡಿಗೆ ಪಡೆಯದೆ ಮನೆ ಕೊಡಲು ಮುಂದಾಗಿದ್ದಾರೆ.
ಈಗಾಗಲೇ ಬಾದಾಮಿಯಲ್ಲಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಮನೆ ನೋಡಿದ್ದು, ಜೂನ್ 11 ರಂದು ಬಾದಾಮಿ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ಸಿದ್ದರಾಮಯ್ಯ ಆಗಮಿಸಿದ ವೇಳೆ ಯತೀಂದ್ರ ಅವರು ಮನೆ ನೋಡಿದ್ದರಂತೆ.

ಐತಿಹಾಸಿಕ ಬಾದಾಮಿಯನ್ನು ಅಭಿವೃದ್ಧಿ ಮಾಡಲಿ ಎನ್ನುವ ಮಹದಾಸೆ, ಜೊತೆಗೆ ಮಾಜಿ ಸಿಎಂ ಎನ್ನುವ ಎರಡು ಕಾರಣಗಳಿಗಾಗಿ ಬಾಡಿಗೆ ಪಡೆಯದೆ ಮನೆ ಕೊಡಲು ಅಭಿಮಾನಿ ಮುಂದಾಗಿದ್ದಾರೆ.
ಈಗಾಗಲೇ ಬಾದಾಮಿಯಲ್ಲಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರಿಂಗ್ ವಸತಿಗೃಹದಲ್ಲಿ ಇರುವ ಬಗ್ಗೆ ಸಿದ್ದರಾಮಯ್ಯ ಒಲವು ತೋರಿಸಿ, ಓಕೆ ಎಂದಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಅಭಿಮಾನಿ ಬೇರೆ ಬಾಡಿಗೆ ಪಡೆಯದೆ ಮನೆ ಕೊಡಲು ಹೊರಟಿದ್ದಾರೆ.
ಮುಂದೆ ಸಿದ್ದರಾಮಯ್ಯ ಎಲ್ಲಿ ಇರುತ್ತಾರೆ ಎಂಬುದನ್ನು ನಾವುಗಳು ಕಾದು ನೋಡಬೇಕಿದೆ.












Click it and Unblock the Notifications