ಬಾದಾಮಿಯಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ ಸಿದ್ದರಾಮಯ್ಯ!
ಬಾಗಲಕೋಟೆ, ಮೇ 15 : ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಕೊನೆಯ ಸುತ್ತಿನ ತನಕ ಸಿದ್ದರಾಮಯ್ಯ ಅವರಿಗೆ ಪ್ರಬಲ ಪೈಪೋಟಿ ನೀಡಿದರು.
ಸಿದ್ದರಾಮಯ್ಯ ಅವರು 2,250 ಮತಗಳ ಅಂತರದಿಂದ ಬಾದಾಮಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆದರೆ, ಸ್ವ ಕ್ಷೇತ್ರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ.
ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ನಡುವಿನ ಸ್ಪರ್ಧೆಯಿಂದಾಗಿ ಬಾದಾಮಿ ಕ್ಷೇತ್ರದ ಚುನಾವವಣಾ ಕಣ ಕುತೂಹಲಕ್ಕೆ ಕಾರಣವಾಗಿತ್ತು. ಕೊನೆಯ ಸುತ್ತಿನ ತನಕ ಪ್ರಬಲ ಪೈಪೋಟಿ ನಡೆದು, ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದರು.

ಪಡೆದ ಮತಗಳು
* ಸಿದ್ದರಾಮಯ್ಯ 64022
* ಬಿ.ಶ್ರೀರಾಮುಲು 60335
* ಹನುಮಂತ ಬೇವಿನಮರದ 23067












Click it and Unblock the Notifications